ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನನ್ನು ಹತ್ಯೆ ಮಾಡುವುದಾಗಿ ಖಮೇನಿ ಬೆಂಬಲಿಗರ ಶಪಥ
- ಇರಾನ್ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ
- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನನ್ನು ಹತ್ಯೆ ಮಾಡುವುದಾಗಿ ಖಮೇನಿ ಬೆಂಬಲಿಗರ ಶಪಥ
- ಅಮೆರಿಕ-ಇರಾನ್ ಶಾಂತಿ ಒಪ್ಪಂದ ಮುರಿದುಬೀಳುವ ಆತಂಕ
ತೆಹ್ರಾನ್: ಕಳೆದೊಂದು ನಾಲ್ಕು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಸನ್ನಿವೇಶವಿತ್ತು. ನಂತರ ಅಮೆರಿಕ ಮತ್ತು ಇರಾನ್ ಶಾಂತಿ ಮಾತುಕತೆಗೆ ಮುಂದಾದ ಹಿನ್ನಲೆ ಪರಿಸ್ಥಿತಿ ಈಗ ತಿಳಿಗೊಂಡಿದೆ.
ಹೀಗಾಗಿ ನಾಲ್ಕು ತಿಂಗಳ ಹಿಂದೇ ಸಾವನ್ನಪ್ಪಿದ್ದ ಇರಾನ್ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಅಂತ್ಯಕ್ರಿಯೆ ಆರಂಭವಾಗಿದೆ. ಜುಲೈ 3 ರಿಂದ ಆರಂಭವಾಗಿರುವ ಈ ಕಾರ್ಯಕ್ರಮಕ್ಕೆ ಜಗತ್ತಿನ ನಾನಾ ದೇಶದ ಪ್ರತಿನಿಧಿಗಳು ಹಾಗೂ ಖಮೇನಿ ಅಭಿಮಾನಿಗಳು ಪಾಲ್ಗೊಳ್ಳುತ್ತಿದ್ದಾರೆ.
ಟ್ರಂಪ್‌ನನ್ನು ಕೊಂದು ತಿರುತ್ತೇವೆ!
ಈದೀಗ ಖಮೇನಿ ಅಂತ್ಯಸಂಸ್ಕಾರದ ಸಮಾರಂಭದಲ್ಲಿ ಅಮೆರಿಕ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತೆವೆ ಎಂಬ ಘೋಷಣೆ ಕೇಳಿರುತ್ತಿದೆ. ತಮ್ಮ ಮಾಜಿ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿಯ ಸಾವಿಗೆ ಕಾರಣನಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನನ್ನು ಕೊಲ್ಲುವುದೇ (Iran Threat Donald Trump) ನಮ್ಮ ಪರಮೊಚ್ಚ ಗುರಿ ಎಂದು ಹೇಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ನಮ್ಮ ನಾಯಕನ ಸಾವಿಗೆ ಕಾರಣನಾದವನನ್ನು ಕ್ಷಮಿಸಲು ಸಾಧ್ಯವೇ? ಖಂಡಿತವಾಗಿ ಇಲ್ಲ. ಇರಾನ್ ತನ್ನ ಸೇಡನ್ನು ತೀರಿಸಿಕೊಳ್ಳುತ್ತದೆ. ಡೊನಾಲ್ಡ್ ಟ್ರಂಪ್‌ನನ್ನು ನಾವು ಕೊಂದು ಖಮೇನಿ ಸಾವಿಗೆ ಪ್ರತೀಕಾರವನ್ನು ತೆಗೆದುಕೊಳ್ಳುತ್ತೆವೆಂದು ವ್ಯಕ್ತಿಯೊಬ್ಬ ಜನರನ್ನುದ್ದೇಶಿಸಿ ಮಾತನಾಡಿದ್ದಾನೆ.
ಒಪ್ಪಂದ ಮುರಿದು ಬೀಳುತ್ತಾ?
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್ ಮತ್ತು ಅಮೆರಿಕ ಜೊತೆ ನಡೆದಿರುವ ಶಾಂತಿ ಒಪ್ಪಂದ ಮುರಿದು ಬೀಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ನನ್ನು ಕೊಲ್ಲಲು ಇರಾನ್ ಪ್ರಯತ್ನ ಪಟ್ಟರೆ ಸುಮ್ಮನಿರುವ ಜಾಯಮಾನ ಅಮೆರಿಕದ್ದಲ್ಲ.
ಅಮೆರಿಕ ಮತ್ತೆ ಇರಾನ್ ಮೇಲೆ ದಾಳಿ ಮಾಡಿದರೆ ಜಗತ್ತು ಇದರಿಂದ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಲಿದೆ ಹಾಗಾಯೇ ಮತ್ತೊಮ್ಮೆ ಈ ಸಂಘರ್ಷ ಆರಂಭವಾದರೆ ಮತ್ತೆ ಶಾಂತಿ ಎನ್ನುವುದು ಸಾಧ್ಯವಿಲ್ಲ ಎನ್ನುವುದು ಜಾತಗಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ, (ಏಜನ್ಸೀಸ್).