ಅಮೆರಿಕವನ್ನು ನಾವು ನಂಬಲ್ಲ: ಇರಾನ್ ನಿಯೋಗದ ಮುಖ್ಯಸ್ಥ ಮೊಹಮ್ಮದ್ ಬಘರ್ ಗಾಲಿಬಾಫ್
- ವಿಫಲವಾದ ಇರಾನ್ ಅಮೆರಿಕ ಶಾಂತಿ ಮಾತುಕತೆ
- ಅಮೆರಿಕವನ್ನು ನಾವು ನಂಬಲ್ಲ: ಇರಾನ್ ನಿಯೋಗದ ಮುಖ್ಯಸ್ಥ ಮೊಹಮ್ಮದ್ ಬಘರ್ ಗಾಲಿಬಾಫ್
- ಪಾಕಿಸ್ತಾನಕ್ಕೆ ನಾವು ಕೃತಜ್ಞ
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಸಂಘರ್ಷವನ್ನು ಶಾಂತಗೊಳಿಸುವ ಉದ್ದೇಶದಿಂದ ಶನಿವಾರ (ಏ.11) ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನಿನ ಶಾಂತಿ ನಿಯೋಗ ಮಾತುಕತೆ ನಡೆಸಿತು.
ಆದರೆ ಈ ಶಾಂತಿ ಮಾತುಕತೆ ವಿಫಲವಾಗಿದ್ದು, ಈ ಕುರಿತು ಮಾತನಾಡಿರುವ ಇರಾನ್ ಸಂಸತ್ತಿನ ಸ್ಪೀಕರ್ ಮತ್ತು ನಿಯೋಗದ ಮುಖ್ಯಸ್ಥ ಮೊಹಮ್ಮದ್ ಬಘರ್ ಗಾಲಿಬಾಫ್ (Mohammad Bagher Ghalibaf), ನಾವು ಅಮೆರಿಕವನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಮೆರಿಕ ವಿಶ್ವಾಸಾರ್ಹ ದೇಶವಲ್ಲ!
ನಾವು ಮಾತುಕತೆಯ ಮೊದಲು ಯಾವುದೇ ರೀತಿಯ ಪೂರ್ವಾಗ್ರಹವನ್ನು ಹೊಂದಿರಲಿಲ್ಲ, ನಾವು ಈ ಒಪ್ಪಂದ ಸಭೆ ಯಶಸ್ವಿಯಾಗಲಿದೆ ಎಂದೇ ತಿಳಿದಿದ್ದೆವು. ಆದರೆ ನಾವು ಈಗಾಗಲೇ ಎರಡು ಯುದ್ಧವನ್ನು ನೋಡಿರುವ ಕಾರಣ ಅಮೆರಿಕ ನಮಗೆ ವಿಶ್ವಾಸಾರ್ಹ ದೇಶವಲ್ಲ ಎಂದು ಅನ್ನಿಸುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ನಾವು ಕೃತಜ್ಞ
ಈ ಶಾಂತಿ ಮಾತುಕತೆಯನ್ನು ಆಯೋಜಿಸಿದ್ದ ಸಹೋದರ ದೇಶ ಪಾಕಿಸ್ತಾನಕ್ಕೆ ನಾವು ಕೃತಜ್ಞರಾಗಿರುತ್ತೆವೆ. ಇರಾನ್ ಪರ ಪಾಕಿಸ್ತಾನದ ಸರ್ಕಾರ ಮತ್ತು ಅಲ್ಲಿಯ ನಾಗರಿಕರಿಗೆ ನಾವು ಆಭಾರಿ ಎಂದು ಹೇಳಿದ್ದಾರೆ.
ಮುರಿದು ಬಿದ್ದ ಶಾಂತಿ ಒಪ್ಪಂದ!
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್ಗೆ ಅಮೆರಿಕ ಮತ್ತು ಇರಾನಿನ ಶಾಂತಿ ನಿಯೋಗ ಆಗಮಿಸಿತ್ತು. ಉಭಯ ದೇಶಗಳ ನಡುವೆ ಸುಮಾರು 21 ಗಂಟೆಗಳವರೆಗೆ ಮಾತುಕತೆ ನಡೆದಿದೆ. ಆದರೆ ಇರಾನಿನ ಯಾವುದೇ ಷರತ್ತುಗಳನ್ನು ಒಪ್ಪಿಕೊಳ್ಳಲು ಅಮೆರಿಕ ಸಿದ್ಧವಿರದ ಕಾರಣ ಈ ಮಾತುಕತೆ ವಿಫಲವಾಗಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.
ಇರಾನಿನ ಷರತ್ತುಗಳೇನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲೆ, ಇರಾನ್ ಶಾಂತಿ ಸ್ಥಾಪನೆಯಾಗ ಬೇಕಾದರೆ ತನ್ನ 10 ಷರತ್ತುಗಳನ್ನು ಮುಂದಿಟ್ಟಿತು. ಯುದ್ಧ ಪರಿಹಾರ ನೀಡಬೇಕು, ಪರಮಾಣು ಶಕ್ತಿ ಹೊಂದಲು ತಡೆಯಬಾರು, ಲೆಬನಾನ್ ಮೇಲೆ ದಾಳಿ ಮಾಡಬಾರದು, ಹೊರ್ಮುಜ್ ಮೇಲೆ ತನ್ನದೆ ಹಿಡಿತವಿರಬೇಕು ಹೀಗೆ ಹತ್ತು ಷರತ್ತುಗಳನ್ನು ಇರಾನ್ ವಿಧಿಸಿತ್ತು. ಆದರೆ ಈ ಷರತ್ತುಗಳೆಗೆ ಅಮೆರಿಕ ಕ್ಯಾರೆ ಅನ್ನದ ಕಾರಣ ಈಗ ಮಾತುಕತೆ ವಿಫಲವಾಗಿದೆ, (ಏಜನ್ಸೀಸ್).