ಗುಜರಾತ್ ಮೂಲದ ಮೇಘನಾಬೆನ್ ಪಟೇಲ್ ಮೃತ ದುರ್ದೈವಿ
- ಅಮೆರಿಕದಲ್ಲಿ ಸತ್ತ ಭಾರತದ ಮಹಿಳೆ
- ವರ್ಜಿನೀಯಾದ ಸೂಪರ್ ಮಾರ್ಕೆಟ್ನಲ್ಲಿ ನಡೆದ ಶೂಟೌಟ್
- ಗುಜರಾತ್ ಮೂಲದ ಮೇಘನಾಬೆನ್ ಪಟೇಲ್ ಮೃತ ದುರ್ದೈವಿ
ವರ್ಜಿನೀಯಾ: ಅಮೆರಿಕದ ಸೂಪರ್ ಮಾರ್ಕೆಟ್ವೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಭಾರತದ ಗುಜರಾತ್ ಮೂಲಕ ಮಹಿಳೆಯೊಬ್ಬಳನ್ನು ಗುಂಡಿಕ್ಕಿ ಕೊಂದ ಘಟನೆ ವರ್ಜಿನೀಯಾದಲ್ಲಿ ವರದಿಯಾಗಿದೆ. ಮೃತ ಮಹಿಳೆಯನ್ನು ಮೇಘನಾಬೆನ್ ಪಟೇಲ್ (Meghanaben Patel) (45) ಎಂದು ಗುರುತಿಸಲಾಗಿದ್ದು, ಇಕೆ ಸುಮಾರು ಹತ್ತು ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದ ಬಗ್ಗೆ ಮಾಹಿತಿ ಲಭಗಯವಾಗಿದೆ.
ಭಾರತದ ಮಹಿಳೆ ಸಾವು!
ಸೂಪರ್ ಮಾಕೆರ್ಟ್ನ ದರೋಡೆಗೆ ಯತ್ನಿಸಿದ ಸಮಯದಲ್ಲಿ ಮೇಘನಾಬೆನ್ ಪಟೇಲ್ ಮೇಲೆ ವ್ಯಕ್ತಿ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ.ಈ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಶಂಕಿತನನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿ ಪ್ರಕಾರ, ಮೇಘನಾಬೆನ್ ಪಟೇಲ್ ಕಳೆದ ಒಂದು ದಶಕದಿಂದ ವರ್ಜಿನೀಯಾದಲ್ಲಿ ತನ್ನ ಪತಿ ಉಪೇಂದ್ರಭಾಯಿ ಪಟೇಲ್, ಮಗಳು ನಕ್ಷೀಬೆನ್ ಮತ್ತು ಮಗ ಸ್ಮಿತ್ ಜೊತೆ ವಾಸಿಸುತ್ತಿದ್ದು, ಘಟನೆ ನಡೆದ ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದಳೆಂದು ಹೇಳಲಾಗುತ್ತಿದೆ. ಇಕೆ ಮೂಲತಃ ಗುಜರಾತಿನ ಜಂತ್ರಲ್ ಊರಿನವಳಾಗಿದ್ದು, ಇಕೆಯ ಪಾಲಕರಾದ ಕರ್ಸನ್‌ಭಾಯ್ ಪಟೇಲ್ ಮತ್ತು ಕಪಿಲಾಬೆನ್ ಪಟೇಲ್ ಊರಿನಲ್ಲಿಯೇ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ!
ಈ ಶೂಟೌಟ್ ವಿಡಿಯೋ ಸೂಪರ್ ಮಾರ್ಕೆಟ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂಗಡಿಗೆ ಎಂಟ್ರಿ ಕೊಡುವ ವ್ಯಕ್ತಿಯೊಬ್ಬ ಮೇಘನಾಬೆನ್ ಜೊತೆ ಏನೋ ಮಾತನಾಡುತ್ತಾನೆ. ಆಮೇಲೆ ದಢೀರನೇ ಗನ್ ತೆಗೆದ ಆತ ಆಕೆಯ ಮೇಲೆ ಗಂಡನ್ನು ಹಾರಿಸಿ ಪರಾರಿಯಾಗಿದ್ದಾನೆ. ಸದ್ಯ ಇವನ ಬೇಟೆಗೆ ಇಳಿದಿರುವ ವರ್ಜಿನೀಯಾ ಪೊಲೀಸರು ಶೀಘ್ರವೇ ಇವನನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ, (ಏಜನ್ಸೀಸ್).