ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್ಪೌರ್  
ವಿದೇಶ

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ: ಇಸ್ರೇಲ್​ ದಾಳಿಗೆ ಇರಾನ್​ ಐಆರ್‌ಜಿಸಿ ಮುಖ್ಯಸ್ಥ ಮೊಹಮ್ಮದ್ ಪಕ್ಪೌರ್ ಸಾವು? Mohammad Pakpour

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧ
  • ಇರಾನ್​ ಮೇಲೆ ಇಸ್ರೇಲ್​ನಿಂದ ವೈಮಾನಿಕ ದಾಳಿ
  • ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್ಪೌರ್ ಸಾವು?
ಇರಾನ್​/ಇಸ್ರೇಲ್​: ಮಧ್ಯಪ್ರಾಚ್ಯದಲ್ಲಿ ಇರಾನ್​ ಮತ್ತು ಇಸ್ರೇಲ್​ ನಡುವೆ ರಣ ಭೀಕರ ಯುದ್ಧ ನಡೆಯುತ್ತಿದ್ದು, ವರದಿಯ ಪ್ರಕಾರ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್ಪೌರ್ (Mohammad Pakpour) ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಹಿರಿಯ ಇರಾನಿನ ಮಿಲಿಟರಿ ಮತ್ತು ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳ ನಂತರ ಇಸ್ರೇಲ್ ಈ ಹೇಳಿಕೆಯನ್ನು ನೀಡಿದೆ. ಆದರೆ ಮೊಹಮ್ಮದ್ ಪಕ್ಪೌರ್ ಅವರ ಬಗ್ಗೆ ಇರಾನ್​ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಹಿರಂಗ ಪಡಿಸಿಲ್ಲ.
ಐಆರ್​ಜಿಸಿ ಯೊಳಗಿನ ಹಿರಿಯ ವ್ಯಕ್ತಿಯಾದ ಪಾಕ್ಪೌರ್, ಇರಾನ್‌ನ ಮಿಲಿಟರಿ ಪಡೆಗಳು ಮತ್ತು ಪ್ರಾದೇಶಿಕ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ವ್ಯಕ್ತಿಯಾಗಿದ್ದರು. ಐಆರ್​ಜಿಸಿ ಇರಾನ್‌ನ ಅತ್ಯಂತ ಶಕ್ತಿಶಾಲಿ ಸಂಸ್ಥೆಗಳಲ್ಲಿ ಒಂದಾಗಿದೆ, ಇಸ್ಲಾಮಿಕ್ ಗಣರಾಜ್ಯದ ರಾಜಕೀಯ ವ್ಯವಸ್ಥೆಯನ್ನು ರಕ್ಷಿಸುವ ಮತ್ತು ದೇಶದ ಕ್ಷಿಪಣಿ ಮತ್ತು ಪ್ರಾಕ್ಸಿ ನೆಟ್‌ವರ್ಕ್‌ಗಳ ಜವಾಬ್ದಾರಿ ಈ ಪಡೆ ಮೇಲಿದೆ.
ಸುಪ್ರೀಂ ಲೀಡರ್ ಅಲಿ ಖಮೇನಿ ಅಥವಾ ಹಿರಿಯ ಐಆರ್‌ಜಿಸಿ ಕಮಾಂಡರ್‌ಗಳ ಬಗ್ಗೆ ಹೇಳಿಕೆ ನೀಡದ ಇರಾನಿನ ನ್ಯೂಸ್​ ಏಜನ್ಸಿ, ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಸ್ಪೀಕರ್ ಮೊಹಮ್ಮದ್ ಬಘರ್ ಖಲಿಬಾಫ್, ನ್ಯಾಯಾಂಗ ಮುಖ್ಯಸ್ಥ ಘೋಲಮ್‌ಹೊಸೇನ್ ಮೊಹ್ಸೆನಿ ಎಜೆಯಿ ಮತ್ತು ಸೇನಾ ಮುಖ್ಯಸ್ಥ ಅಬ್ದುಲ್ರಹೀಮ್ ಮೌಸವಿ ಹತಾಮಿ ಜೀವಂತವಾಗಿ ಮತ್ತು ಸುರಕ್ಷಿತವಾಗಿದ್ದಾರೆ ಎಂದು ವರದಿ ಮಾಡಿದೆ. ಆದರೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಕ್ಪೌರ್ ಬಗ್ಗೆ ಯಾವುದೇ ಮಾಹಿತಿಯನ್ನು ಈ ವರೆಗೆ ನೀಡಿಲ್ಲ.
ಟ್ರಂಪ್ ಯುದ್ಧ ಘೋಷಣೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಿಂದ ಅಧಿಕೃತವಾಗಿ ಇರಾನ್ ವಿರುದ್ಧ ಬೃಹತ್ ಯುದ್ಧ ಕಾರ್ಯಾಚರಣೆ ಆರಂಭವಾಗಿದೆ ಎಂದು ಘೋಷಿಸಿದ್ದಾರೆ. ಇರಾನ್‌ನ ಅಣುಶಕ್ತಿ ಕೇಂದ್ರಗಳು ಮತ್ತು ಕ್ಷಿಪಣಿ ನೆಲೆಗಳನ್ನು ಧ್ವಂಸಗೊಳಿಸುವುದೇ ನಮ್ಮ ಗುರಿಯಾಗಿದೆ. ಇರಾನ್ ಜನರೇ, ನಿಮ್ಮ ಸ್ವಾತಂತ್ರ್ಯದ ಸಮಯ ಬಂದಿದೆ, ನಿಮ್ಮ ಸರ್ಕಾರವನ್ನು ನೀವೇ ವಹಿಸಿಕೊಳ್ಳಿ ಎಂದು ಟ್ರಂಪ್​ ಕರೆ ನೀಡಿದ್ದಾರೆ. ಇಸ್ರೇಲ್‌ನ ಯುದ್ಧ ವಿಮಾನಗಳು ಟೆಹ್ರಾನ್‌ನಾದ್ಯಂತ ಬಾಂಬ್ ಮಳೆಗರೆದಿದ್ದು, ಸುಪ್ರೀಂ ಲೀಡರ್ ಖಮೇನಿಯವರ ಕಚೇರಿ ಬಳಿಯೂ ಸ್ಫೋಟಗಳು ಸಂಭವಿಸಿವೆ, (ಏಜನ್ಸೀಸ್​).