ನ್ಯೂಸ್

15ರ ಬಾಲಕನ ಜತೆ ಎಸ್ಕೇಪ್​ ಆಗಿದ್ದ 19ರ ಯುವತಿಗೆ 10 ವರ್ಷ ಜೈಲು! ಮೆಡಿಕಲ್​ ರಿಪೋರ್ಟ್​ ಬಿಚ್ಚಿಟ್ಟ ರಹಸ್ಯವಿದು…

ಇಂದೋರ್​: ಹದಿನೈದು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 19 ವರ್ಷದ ಯುವತಿಗೆ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ. ಇಂದೋರ್​ ಹೆಚ್ಚುವರಿ ನ್ಯಾಯಾಲಯ ಈ ತೀರ್ಪು ನೀಡಿದೆ. 19 ವರ್ಷದ ಯುವತಿ 15 ವರ್ಷದ ಬಾಲಕನೊಂದಿಗೆ ಎಸ್ಕೇಪ್​ ಆಗಿದ್ದಳು. ಬಳಿಕ ಬಾಲಕನ ತಾಯಿ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ದೂರಿನ ಅನ್ವಯ ತನಿಖೆ ನಡೆಸಿದ ಇಂದೋರ್​ ಪೊಲೀಸರು ಬಾಲಕ ಮತ್ತು ಯುವತಿಯನ್ನು ಅಸ್ಸಾಂನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಗುವಾಹಟಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡು ಬಾಲಕನ ಜೊತೆ ಯುವತಿ ಜೀವನ ಸಾಗಿಸುತ್ತಿದ್ದಳು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಇಬ್ಬರು ವಶಕ್ಕೆ ಪಡೆದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಇಬ್ಬರ ನಡುವೆ ಲೈಂಗಿಕ ಸಂಭೋಗ ನಡೆದಿರುವುದು ಖಚಿತವಾಗಿದೆ. ಅಪ್ರಾಪ್ತನನ್ನು ಕಾಮತೃಷೆಗೆ ಬಳಸಿಕೊಂಡಿದ್ದಕ್ಕೆ ಯುವತಿಯ ವಿರುದ್ಧ ಪೊಕ್ಸೊ ಪ್ರಕರಣವನ್ನು ದಾಖಲಿಸಲಾಗಿದೆ. ಬಾಲಕನನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. (ಏಜೆನ್ಸೀಸ್​)