ನ್ಯೂಸ್

ಕೆನಡಾದಲ್ಲಿ ಖಲಿಸ್ತಾನಿಗಳ ರ‍್ಯಾಲಿಯ ಕಾವು ಆರಿಸಿದ ಭಾರತೀಯರು! ಮಾಡಿದ್ದೇನು ಗೊತ್ತಾ?

ಟೊರೊಂಟೊ: ಕೆನಡಾ ದೇಶದ ಟೊರೊಂಟೊ ನಗರದಲ್ಲಿ ನಡೆದ ಖಲಿಸ್ತಾನ್ ಪರ ರ‍್ಯಾಲಿಯು ಇಂದು ಭಾರತೀಯರ ಕಾರಣದಿಂದಾಗಿ ಮಬ್ಬಾಗಿದೆ.

ಕೆನಡಾದ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಹೊರಗೆ ಕೆಲ ಖಲಿಸ್ತಾನ್ ಪರ ಬೆಂಬಲಿಗರು ಜಮಾಯಿಸಿದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಅನಿವಾಸಿ ಭಾರತೀಯರು ರಾಷ್ಟ್ರೀಯ ಧ್ವಜವನ್ನು ಬೀಸುತ್ತಾ ಅಲ್ಲಿಗೆ ಬಂದಿದ್ದು "ಭಾರತ್ ಮಾತಾ ಕಿ ಜೈ", "ಲಾಂಗ್ ಲಿವ್ ಇಂಡಿಯಾ" ಮತ್ತು "ವಂದೇ ಮಾತರಂ" ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಜೂನ್ 18ರಂದು ಇಂಗ್ಲೆಂಡ್​ನಲ್ಲಿ ಕೊಲ್ಲಲ್ಪಟ್ಟ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ನಾಯಕ ಹರ್ದೀಪ್ ಸಿಂಗ್ ನಿಜ್ಜರ್​ನ ಪೋಸ್ಟರ್‌ಗಳನ್ನು ಖಲಿಸ್ತಾನಿ ಗುಂಪು ಹೊಂದಿತ್ತು.

ಈ ತಿಂಗಳ ಆರಂಭದಲ್ಲಿ, 'ಖಲಿಸ್ತಾನ್ ಸ್ವಾತಂತ್ರ್ಯ ರ‍್ಯಾಲಿ' ಪೋಸ್ಟರ್ ಭಾರತದಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತ್ತು. ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಟೊರೊಂಟೊದಲ್ಲಿನ ಕಾನ್ಸುಲ್ ಜನರಲ್ ಅಪೂರ್ವ ಶ್ರೀವಾಸ್ತವ ಅವರನ್ನು ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜಾರ್ ಅವರ "ಕೊಲೆಗಾರರು" ಎಂದು ಕರೆಯುತ್ತಾರೆ.

ಖಲಿಸ್ತಾನಿಗಳು ಆಪರೇಷನ್ ಬ್ಲೂ ಸ್ಟಾರ್‌ನ 39ನೇ ವಾರ್ಷಿಕೋತ್ಸವವನ್ನು ಆಚರಿಸಿದ ಒಂದು ತಿಂಗಳ ನಂತರ, ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಬಟ್ಟೆಯ ಮೇಲೆ ರಕ್ತವಿರುವ ಟೇಬಲ್‌ಲೋ ಮತ್ತು "ಶ್ರೀ ದರ್ಬಾರ್ ಸಾಹಿಬ್ ಮೇಲಿನ ದಾಳಿಯ ಪ್ರತೀಕಾರ" ಎಂಬ ಪೋಸ್ಟರ್ ಅನ್ನು ಹಾಕಿದ್ದರು. (ಏಜೆನ್ಸೀಸ್)