ನ್ಯೂಸ್

ಇದಪ್ಪಾ ಅದೃಷ್ಟ ಅಂದ್ರೆ; ಭಾರತ ಮೂಲದ ವ್ಯಕ್ತಿಗೆ ಹೊಡೀತು 45 ಕೋಟಿ ರೂಪಾಯಿ ದುಬೈ ಲಾಟರಿ

ನವದೆಹಲಿ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಅರಬ್​ ರಾಷ್ಟ್ರ ಯುಎಇಯಾದ್ಯಂತ ವಾಸಿಸುತ್ತಿರುವ ಭಾರತೀಯರ ಪೈಕಿ ಕಳೆದೊಂದು ವಾರದಲ್ಲಿ ಸುಮಾರು ಐದು ಮಂದಿ ಲಾಟರಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಸಿರಿವಂತರಾಗಿದ್ದಾರೆ. ಇದೀಗ ಕೇರಳ ಮೂಲದ ಶ್ರೀಜು ಎಂಬುವವರು ಬರೋಬ್ಬರಿ 45 ಕೋಟಿ ರೂಪಾಯಿ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ಧಾರೆ.

ದುಬೈನ ಖಾಸಗಿ ಕಂಪನಿ ಒಂದರಲ್ಲಿ ತೈಲ ಮತ್ತು ಅನಿಲ ಉದ್ಯಮದ ನಿಯಂತ್ರಣ ಕೊಠಡಿಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಶ್ರೀಜು ಬುಧವಾರ ಪ್ರಕಟಗೊಂಡ ಲಾಟರಿ ಫಲಿತಾಂಶದಲ್ಲಿ 45 ಕೋಟಿ ರೂಪಾಯಿ ಗೆಲ್ಲುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಉಳಿದಂತೆ ಕೇರಲ ಮೂಲದ ಶರತ್​ ಶಿವದಾನಸ್ 11 ಲಕ್ಷ ರೂ., ಮುಂಬೈ ಮೂಲದ ಮನೋಜ್ ಭಾವಸಾರ್ 16 ಲಕ್ಷ ರೂ., ದೆಹಲಿ ಮೂಲದ ಅನಿಲ್​ ಜಿಯಾಚಂದಾನಿ 10 ಲಕ್ಷ ರೂ., ಕಳೆದ ಎರಡು ವಾರಗಳಲ್ಲಿ ಗೆದ್ದಿರುವ ಲಾಟರಿ ಮೊತ್ತವಾಗಿದೆ.