ನ್ಯೂಸ್

ಬಹುನಿರೀಕ್ಷಿತ 'ಇಂಡಿಯನ್ 2' ಚಿತ್ರೀಕರಣ ಯಾವಾಗ?; ಇಲ್ಲಿದೆ ಕುತೂಹಲಕಾರಿ ಅಪ್ಟೇಟ್​!

ತಮಿಳುನಾಡು: ಕಾಲಿವುಡ್​ನ ಬಹುಭಾಷಾ ನಟ ಕಮಲ್​ ಹಾಸನ್​ ಮತ್ತು ಖ್ಯಾತ ನಿರ್ಮಾಪಕ ಎಸ್​. ಶಂಕರ್ ಷಣ್ಮುಗಂ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ 'ಇಂಡಿಯನ್ 2' ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ.

'ಇಂಡಿಯನ್​ 2' ಚಿತ್ರದ ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗಲಿದ್ದು, ಸಿನಿಮಾದ ಬಹುಮುಖ್ಯ ಭಾಗಗಳು ಒಂದಷ್ಟು ವಾರಗಳ ಕಾಲ ವಿಜಯವಾಡ ಮತ್ತು ವೈಜಾಗ್‌ನಲ್ಲಿ ನಡೆಯಲಿದೆ ಎಂದು ವದಂತಿಗಳಿವೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.

ಈಗಾಗಲೇ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಹಾಗೂ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಕಮಲ್​ ಫ್ಯಾನ್ಸ್​ ಮತ್ತು ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಚಿತ್ರದಲ್ಲಿ ಸಿದ್ಧಾರ್ಥ್, ಬಾಬಿ ಸಿಂಹ, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಸಮುದ್ರಕನಿ ಮುಂತಾದವರ ತಾರಾಗಣವಿದೆ. ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಅನ್ನು ಲೈಕಾ ಪ್ರೊಡಕ್ಷನ್ಸ್, ರೆಡ್ ಜೈಂಟ್ ಮೂವೀಸ್ ನಿರ್ಮಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).