ನ್ಯೂಸ್

ಆಪರೇಷನ್ ಬ್ರಹ್ಮ | ಭೂಕಂಪ ಪೀಡಿತ ಮ್ಯಾನ್ಮಾರ್‌ಗೆ ಭಾರತದಿಂದ 442 ಮೆಟ್ರಿಕ್ ಟನ್ ಆಹಾರ ನೆರವು;Myanmar

Myanmar | ದಕ್ಷಿಣ ಕರಾವಳಿ ಪ್ರದೇಶದ ತಿಲಾವಾ ಬಂದರಿನಲ್ಲಿರುವ ಭೂಕಂಪ ಪೀಡಿತ ಪ್ರದೇಶವಾದ ಮ್ಯಾನ್ಮಾರ್‌ಗೆ ಭಾರತ ಬೃಹತ್ ಪ್ರಮಾಣದ ಆಹಾರ ನೆರವನ್ನು ನೀಡಿದೆ. ಮಾರ್ಚ್ 28 ರಂದು ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, 3,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಆಪರೇಷನ್ ಬ್ರಹ್ಮ ಕಾರ್ಯಾಚರಣೆಯ  ಭಾಗವಾಗಿ ಭಾರತ ಆಹಾರದ ನೆರವು ನೀಡಿದೆ.

ಏನಿದು ಆಪರೇಷನ್ ಬ್ರಹ್ಮ?

ಭೂಕಂಪದ ನಂತರ ಕಳೆದು ಹೋದವರಿಗಾಗಿ ಹುಡುಕಾಟ, ರಕ್ಷಣೆ, ನೆರವು, ವಿಪತ್ತು ಪರಿಹಾರ ಮತ್ತು ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಬೆಂಬಲವನ್ನು ಒದಗಿಸಲು ಭಾರತವು ಆಪರೇಷನ್ ಬ್ರಹ್ಮವನ್ನು ಪ್ರಾರಂಭಿಸಿತು. ಭಾರತವು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮ್ಯಾನ್ಮಾರ್‌ಗೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ತಲುಪಿಸಿತು. ಶನಿವಾರ (5) ಮ್ಯಾನ್ಮಾರ್‌ನಿಂದ ದಕ್ಷಿಣಕ್ಕೆ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ತಿಲಾವಾ ಬಂದರಿನಲ್ಲಿ ನೌಕಾ ಹಡಗಿನ ಮೂಲಕ 442 ಮೆಟ್ರಿಕ್ ಟನ್ ಆಹಾರವನ್ನು ಪೂರೈಕೆ ಮಾಡಿದೆ.

ಅಕ್ಕಿ, ಅಡುಗೆ ಎಣ್ಣೆ, ನೂಡಲ್ಸ್ ಮತ್ತು ಬಿಸ್ಕತ್ತುಗಳು ಸೇರಿದಂತೆ 442 ಟನ್ ಆಹಾರವನ್ನು ಲ್ಯಾಂಡಿಂಗ್ ಶಿಪ್ ಟ್ಯಾಂಕ್ INS ಘರಿಯಲ್ ಹೊತ್ತೊಯ್ದಿದ್ದು, ಭೂಕಂಪ ಪೀಡಿತ ಜನರ ಅಗತ್ಯಗಳನ್ನು ಪೂರೈಸಲಾಗುತ್ತಿದೆ. 442 ಟನ್​ ಆಹಾರ ನೆರವಿನಲ್ಲಿ 405 ಮೆಟ್ರಿಕ್ ಟನ್ ಅಕ್ಕಿ, 30 ಮೆಟ್ರಿಕ್ ಟನ್ ಅಡುಗೆ ಎಣ್ಣೆ, 5 ಮೆಟ್ರಿಕ್ ಟನ್ ಬಿಸ್ಕತ್ತುಗಳು ಮತ್ತು 2 ಮೆಟ್ರಿಕ್ ಟನ್ ನೂಡಲ್ಸ್​ಅನ್ನು ಒಳಗೊಂಡಿದೆ.

ಇವೆಲ್ಲವೂ ಮ್ಯಾನ್ಮಾರ್‌ನಲ್ಲಿ ಪೀಡಿತ ಜನಸಂಖ್ಯೆಯ ತಕ್ಷಣದ ಆಹಾರ ಅಗತ್ಯಗಳನ್ನು ಪೂರೈಸುವ ಸರಬರಾಜುಗಳಾಗಿವೆ ಎಂದು ವಿದೇಶಾಂಗ ಸಚಿವಾಲಯದ ತಿಳಿಸಿದೆ. ಶುಕ್ರವಾರ, ಭಾರತವು ಇತರ QUAD ಪಾಲುದಾರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಜಪಾನ್ ಮತ್ತು US ಜೊತೆಗೆ ಮ್ಯಾನ್ಮಾರ್ ಭೂಕಂಪ ಪ್ರತಿಕ್ರಿಯೆಗಾಗಿ 20 ಮಿಲಿಯನ್ USD ಗಿಂತ ಹೆಚ್ಚಿನ ಮಾನವೀಯ ಸಹಾಯವನ್ನು ನೀಡಿತ. ಇನ್ನೂ ಹೆಚ್ಚಿನ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಮೂಲಕ ಪೀಡಿತರ ಚಿಕಿತ್ಸೆಗಾಗಿ ತುರ್ತು ವೈದ್ಯಕೀಯ ತಂಡಗಳನ್ನು ನಿಯೋಜನೆ ಮಾಡಿತ್ತು.