ನ್ಯೂಸ್

ಕರೊನಾ: ಸಕ್ರಿಯ ಕೇಸುಗಳಲ್ಲಿ ಇಳಿಕೆ; 26,964 ಹೊಸ ಪ್ರಕರಣಗಳು

rashmirhebbur

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 26,964 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, 383 ಜನರು ಕರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ವರದಿ ಹೇಳಿದೆ. ನಿನ್ನೆಯ ವರದಿಯಲ್ಲಿ ದೇಶಾದ್ಯಂತ 26,115 ನಿತ್ಯಪ್ರಕರಣಗಳು ದಾಖಲಾಗಿದ್ದವು ಹಾಗೂ 252 ಕರೊನಾ ಸಾವು ಸಂಭವಿಸಿದ್ದವು.

ಕೇರಳದಲ್ಲಿ ಕರೊನಾ ನಿಯಂತ್ರಣಕ್ಕೆ ಬರುತ್ತಿರುವ ಸಂಕೇತವೆಂಬಂತೆ, ಕಳೆದ 24 ಗಂಟೆಗಳಲ್ಲಿ 15,768 ಹೊಸ ಕೇಸುಗಳು ಮಾತ್ರ ವರದಿಯಾಗಿದ್ದು, 214 ಜನರು ಮೃತಪಟ್ಟಿದ್ದಾರೆ. ದೇಶಾದ್ಯಂತ ಹಾಲಿ ಸಕ್ರಿಯವಾಗಿರುವ ಕರೊನಾ ಪ್ರಕರಣಗಳ ಸಂಖ್ಯೆಯು 3,01,989 ರಷ್ಟಿದ್ದು, ಇದು ಕಳೆದ 186 ದಿನಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. (ಏಜೆನ್ಸೀಸ್)