Independence day: ಇನ್ನೇನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ನಾಡಿನಾದ್ಯಂತ ನೆರವೇರಲಿದ್ದು, ದೆಹಲಿಯ ಕೆಂಪು ಕೋಟೆಯಲ್ಲಿ ಈಗಾಗಲೇ ಬಿಗಿ ಬಂದೋಬಸ್ತ್ನೊಂದಿಗೆ ವೇದಿಗೆ ಸಜ್ಜಾಗುತ್ತಿದೆ. ಇನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ 10,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಗುರುವಾರ (ಆ.07) ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎಸ್‌ಬಿಕೆ ಸಿಂಗ್ ಅವರು ವಿಶೇಷ ಆಯುಕ್ತರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಕೆಂಪು ಕೋಟೆಯಲ್ಲಿ ಬಹು ಹಂತದ ಭದ್ರತೆಯನ್ನು ಒದಗಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಭೌತಿಕ ನಿಯೋಜನೆ ಹೊರತಾಗಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಂಪು ಕೋಟೆಯ ಬಳಿ ಎತ್ತರದ ಕಟ್ಟಡಗಳ ಸುರಕ್ಷತೆ ಕಾಪಾಡಲು ಸ್ನೈಪರ್‌ಗಳು ಮತ್ತು ಮೇಲ್ಛಾವಣಿ ಕಣ್ಗಾವಲು ತಂಡಗಳನ್ನು ನಿಯೋಜಿಸಲಾಗಿದೆ. ನಿರ್ಬಂಧಿತ ವಲಯಗಳಲ್ಲಿ ಪ್ರವೇಶ ನಿಯಂತ್ರಣವನ್ನು ಕಟುನಿಟ್ಟಾಗಿ ನಿಯಂತ್ರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ರಾತ್ರೋರಾತ್ರಿ ನಟ ವಿಷ್ಣುವರ್ಧನ್ ಸಮಾಧಿ ನೆಲಸಮ: ಅಭಿಮಾನಿಗಳಲ್ಲಿ ಭುಗಿಲೆದ್ದ ಆಕ್ರೋಶ! | Vishnuvardhan
ಶಾಂತಿಯನ್ನು ಭಂಗಗೊಳಿಸುವಂತಹ ಯಾವುದೇ ಆನ್‌ಲೈನ್ ಬೆದರಿಕೆಗಳು ಅಥವಾ ತಪ್ಪು ಮಾಹಿತಿ ಪ್ರಚಾರಗಳನ್ನು ತಟಸ್ಥಗೊಳಿಸಲು ಸೈಬರ್ ಘಟಕಗಳು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಇನ್ನು ಅರಸೈನಿಕ ಪಡೆಗಳು, ವಿಶೇಷ ಕಮಾಂಡಗಳು ಸೇರಿದಂತೆ 10,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳಿಗೆ ವಾರಪೂರ್ತಿ ತರಬೇತಿ ನಡೆಸಿ, ಆಚರಣೆಯ ದಿನದಂದು ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ( ಏಜೆನ್ಸೀಸ್)