ಮುಟ್ಟಿನ ಅವಧಿಯ ಹೊಟ್ಟೆ ನೋವನ್ನು ನಿವಾರಣೆ ಮಾಡಲು ಆಹಾರದ ಜೊತೆ ಇವುಗಳನ್ನು ಸೇವಿಸಿ.. | Period pain

untitled-design-61-6895dee456b40
Published on

Period pain: ಪ್ರತಿ ತಿಂಗಳು ಬರುವಂತಹ ಮುಟ್ಟಿನ ಸಮಸ್ಯೆಯಿಂದ ಬಹಳಷ್ಟು ಮಹಿಳೆಯರು ನೋವನ್ನು ಅನುಭವಿಸುತ್ತಾರೆ. ಸರಿಯಾದ ಆಹಾರವನ್ನು ಸೇವಿಸುವುದರಿಂದ ಆಹಾರವೂ ಕೂಡಾ ಔಷಧಿಯಾಗಿ ಕಾರ್ಯ ನಿರ್ವಹಿಸಬಲ್ಲದು. ವಿವಿಧ ವಯೋಮಾನದವರಲ್ಲಿ ಈ ರೀತಿಯ ಸಮಸ್ಯೆಗಳು ಕಂಡುಬರುವುದರಿಂದ ನಿಮ್ಮ ಮುಟ್ಟಿನ ಅವಧಿಗಿಂತ ಮೊದಲು ಒಂದು ವಾರದಿಂದ ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡುವುದರಿಂದ ನೋವನ್ನು ದೂರ ಮಾಡಬಹುದು. ಹಾಗಾದರೆ ಮುಟ್ಟಿನೊಂದಿಗೆ ಬರುವ ಸೆಳೆತ, ಮನಸ್ಥಿತಿ ಬದಲಾವಣೆ ಹಾಗೂ ಭಾವನಾತ್ಮಕ ಏರಿಳಿತವನ್ನು ಕಡಿಮೆ ಮಾಡಲು ಈ ರೀತಿ ಆಹಾರ ಸೇವಿಸಿ...

ಹದಿಹರೆಯದ ಹುಡುಗಿಯರಿಗೆ ಮುಟ್ಟಿನ ನೋವನ್ನು ಕಡಿಮೆ ಮಾಡಲು ಉತ್ತಮ ಆಹಾರಗಳು

ಹದಿಹರೆಯರರಲ್ಲಿ ಹಾರ್ಮೋನ್​ಗಳು ಏರಿತಳಿತವನ್ನುಂಟು ಮಾಡುತ್ತವೆ. ಮನಸ್ಸಿನ ಸ್ಥಿತಿ ಬದಲಾವಣೆಗೊಳ್ಳುತ್ತದೆ. ಆದರಿಂದ ಹೊರಗಿನ ತಿಂಡಿಗಳನ್ನು ಸೇವಿಸುವುದನ್ನು ನಿಲ್ಲಿಸಿ, ಮನೆಯಲ್ಲಿಯೇ ತಯಾರಿಸಿದ ಪದಾರ್ಥಗಳಾದ ಜೋಳ, ರಾಗಿ, ಅಕ್ಕಿ ಧಾನ್ಯಗಳಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ಏರಿಳಿತವಾಗುವ ಮಟ್ಟವನ್ನು ಕಡಿಮೆ ಮಾಡುತ್ತದೆ.

ಅದೇ ರೀತಿಯಲ್ಲಿ ಬೆಚ್ಚಗಿನ ನೀರು ಹಾಗೂ ಚಹಾದಲ್ಲಿ ಅಜ್ವೈನ ಸೇರಸಿ ಸೇವಿಸುವುದರಿಂದ ಸೆಳೆತವನ್ನು ಕಡಿಮೆ ಮಾಡಬಹುದು. ತಂಪು ಪಾನೀಯಗಳು, ಅತಿಯಾದ ಸಕ್ಕರೆ, ಡೀಪ್-ಫ್ರೈ ಮಾಡಿದ ಆಹಾರಗಳನ್ನು ಸೇವಿಸಬಾರದು. ಏಕೆಂದರೆ ಇದು ಮನಸ್ಥಿತಿಯ ಏರಿಳಿತಗಳನ್ನು ಉಲ್ಬಣಗೊಳಿಸುತ್ತದೆ. ಹಾಗೆಯೇ ಮಲಗುವ ಮುನ್ನ ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಉರಿಯೂತವನ್ನು ನಿವಾರಣೆ ಮಾಡುತ್ತದೆ.

ವಯಸ್ಕ ಮಹಿಳೆಯರಿಗೆ ಮುಟ್ಟಿನ ಅಸ್ವಸ್ಥತೆಯನ್ನು ನಿರ್ವಹಿಸಲು ಸಹಾಯ ಮಾಡುವ ಆಹಾರಗಳು

ಕೆಲಸದ ಒತ್ತಡ ಮತ್ತು ನಿಯಮಿತವಾಗಿ ಆಹಾರ ಸೇವಿಸದಿರುವುದು ಮುಟ್ಟಿನ ಪೂರ್ವದ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮ್ಮ ಮುಟ್ಟಿನ ಸಮಯದಲ್ಲಿ ಕಬ್ಬಿಣ, ಮೆಗ್ನೀಶಿಯಮ್​, ಸೊಪ್ಪು, ತರಕಾರಿಗಳು, ಎಳ್ಳು ಹಾಗೂ ಬಾದಾಮಿ ಸೇವಿಸುವುದರಿಂದ ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಬಹುದು.

ಊಟದಲ್ಲಿ ಮೆಂತ್ಯ ಚಹ ಹಾಗೂ ಸ್ವಲ್ಪ ಹುರಿದ ಮೆಂತ್ಯ ಬೀಜಗಳನ್ನು ಸೇವಿಸುವುದರಿಂದ ಸೆಳೆತದ ತೀವ್ರತೆ ಕಡಿಮೆಯಾಗುತ್ತದೆ. ಉಪ್ಪು ಹಾಗೂ ಖಾರ ತಿಂಡಿಗಳನ್ನು ಮಿತಿಗೊಳಿಸುವುದರಿಂದ ಅಧಿಕ ನೋವನ್ನು ಕಡಿಮೆಗೊಳಿಸಬಹುದು.

40 ವರ್ಷ ಮೇಲ್ಪಟ್ಟವರಲ್ಲಿ ಮುಟ್ಟಿನ ಅಸ್ವಸ್ಥತೆ ನಿರ್ವಹಿಸಲು ಸಹಾಯ ಮಾಡುವ ಆಹಾರ

ಈ ವಯಸ್ಸಿನಲ್ಲಿರುವ ಮಹಿಳೆಯರಿಗೆ ಮುಟ್ಟಿನ ತೀವ್ರತೆಯಲ್ಲಿ ಹಾರ್ಮೋನ್​ಗಳ ಏರಿಳಿತಗಳು ತೀಕ್ಷಣವಾಗಿರುತ್ತದೆ. ಆಗ್ಗಾಗೆ ಮನಸ್ಥಿತಿಯಲ್ಲಿನ ಬದಲಾವಣೆ ಆಗುತ್ತಿರುತ್ತವೆ. ಆದರಿಂದ ಆಹಾರ ಸೇವಿಸುವ ವೇಳೆ ಅಗಸೆ ಬೀಜ, ವಾಲ್​ನಟ್​ ಮತ್ತು ಬೆಚ್ಚಗಿನ ಸೂಪ್​ಗಳನ್ನು ಸೇವಿಸುವುದರಿಂದ ನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದು.

ಇನ್ನು ಸಂಸ್ಕರಿಸಿದ ಮಾಂಸ, ಆಲ್ಕೋಹಾಲ್ ಮತ್ತು ಅತಿಯಾದ ಡೈರಿ ಉತ್ಪನ್ನಗಳನ್ನು ತಿನ್ನಬೇಡಿ, ಏಕೆಂದರೆ ಇದು ಉರಿಯೂತವನ್ನು ಪ್ರಚೋದಿಸಿ, ಕಿರಿಕಿರಿ ಅನುಭವ ಉಂಟುಮಾಡುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net