ನ್ಯೂಸ್

ಸಚಿವ ಎಂಟಿಬಿ ನಾಗರಾಜ್​ರ ಬಾಮೈದನ ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್​ರ ಬಾಮೈದನ ಮನೆ ಮೇಲೆ ಐಟಿ(ಆದಾಯ ತೆರಿಗೆ) ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕಗ್ಗದಾಸಪುರದಲ್ಲಿರುವ ಎಂ.ಟಿ.ಬಿ ನಾಗರಾಜ್ ಬಾಮೈದ ಚಂದ್ರಶೇಖರ್​ರ ನಿವಾಸದ ಮೇಲೆ ಬುಧವಾರ ಬೆಳಗ್ಗೆ ಎರಡು ಇನೋವಾ ಕಾರಿನಲ್ಲಿ ಬಂದ 8 ಐಟಿ ಅಧಿಕಾರಿಗಳ ತಂಡ, ಮಹತ್ವದ ದಾಖಲೆಗಳಿಗೆ ಶೋಧಕಾರ್ಯ ನಡೆಸಿದ್ದಾರೆ. ಚಂದ್ರಶೇಖರ್ ರಿಯಲ್ ಎಸ್ಟೇಟ್ ಉದ್ಯಮಿ.