ದಾತಿಯಾ: ಮದುವೆ ಅತಿಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ನದಿಗೆ ಬಿದ್ದು ಮೂವರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ಅವಹೇಳನಕಾರಿ ಪೋಸ್ಟ್; ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ದೂರು ದಾಖಲು
ಬುಹಾರಾ ಗ್ರಾಮದ ಬಳಿ ಸೇತುವೆ ನಿರ್ಮಾಣವಾಗುತ್ತಿದ್ದು, ಜನರ ಸಂಚರಕ್ಕಾಗಿ ಇಲ್ಲಿನ ನದಿಗೆ ಅಡ್ಡಲಾಗಿ ತಾತ್ಕಲಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಮಂಗಳವಾರ ತಡರಾತ್ರಿ ಟ್ರಕ್ ಇಲ್ಲಿ ಸಾಗುತ್ತಿದ್ದಾಗ ವಾಹನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ.
ಪರಿಣಾಮವಾಗಿ ಓರ್ವ ಮಹಿಳೆ ಹಾಗೂ ಯುವಕ, ಮೂವರು ಚಿಕ್ಕ ಮಕ್ಕಳು ಮೃತಪಟ್ಟಿದ್ದು, ಇಪ್ಪತ್ನಾಲ್ಕು ಜನರು ಗಾಯಗೊಂಡಿದ್ದಾರೆ. ಅಲ್ಲದೇ, ಹಲವಾರು ಮಕ್ಕಳು ಕಾಣೆಯಾಗಿದ್ದಾರೆ. ಟ್ರಕ್ನಲ್ಲಿದ್ದವರೆಲ್ಲ ಗ್ವಾಲಿಯರ್‌ನ ಬಿಲ್ಹೇಟಿ ಗ್ರಾಮದ ನಿವಾಸಿಗಳಾಗಿದ್ದು. ಮದುವೆಗಾಗಿ ಟಿಕಮ್‌ಗಢ್‌ಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದು ಮದುವೆ ಮನೆಯಲ್ಲಿ ಶೋಕ ಮಡುಗಟ್ಟಿದೆ.
ಇದನ್ನೂ ಓದಿ: ಕಳಪೆ ಬಿತ್ತನೆಬೀಜ ಮಾರಿದರೆ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಎಚ್ಚರಿಕೆ
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆದಿದ್ದಾರೆ. ಪೊಲೀಸರ ಈ ಕಾರ್ಯಾಚಾರಣೆಗೆ ಸ್ಥಳೀಯರು, ಮೀನುಗಾರರು ಕೈಜೋಡಿಸಿದ್ದಾರೆ.(ಏಜೆನ್ಸೀಸ್)