ಬೆಂಗಳೂರು: ವಾಟ್ಸ್ಆ್ಯಪ್, ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ಗಳಲ್ಲಿ ಒಂದಾಗಿದೆ. ಇದನ್ನು 2 ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಬಳಸುತ್ತಿದ್ದಾರೆ. ಸದಾ ಹೊಸ ಅಪ್ಡೇಟ್ಗಳನ್ನು ಕಾಣುತ್ತಿರುವ ಆ್ಯಪ್ಗಳಲ್ಲಿ ಇದು ಕೂಡಾ ಒಂದಾಗಿದೆ.
ಮತ್ತು, ವಾಟ್ಸ್ಆ್ಯಪ್ ಬೀಟಾ ಇನ್ಫೋನ ಇತ್ತೀಚಿನ ವರದಿಯ ಪ್ರಕಾರ, ಪ್ಲಾಟ್‌ಫಾರ್ಮ್ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಅದು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಿದ 15 ನಿಮಿಷಗಳವರೆಗೆ ಎಡಿಟ್ ಮಾಡಲು ಅನುಮತಿಸುತ್ತದೆ. ಆಪಲ್‌ನ iMessage ಅಪ್ಲಿಕೇಶನ್‌ನಲ್ಲಿ ಎಡಿಟ್ ಬಟನ್ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಹಾಗೆಯೇ ಇದೂ ಕೆಲಸ ಮಾಡಲಿದೆ.
ನೀವು ಯಾವುದೇ ಅಕ್ಷರ ದೋಷ ಅಥವಾ ವ್ಯಾಕರಣದ ತಪ್ಪುಗಳನ್ನು ಸರಿಪಡಿಸಲು ಅಥವಾ ಕೆಲವು ಮಾಹಿತಿಯನ್ನು ಸೇರಿಸಲು ಅಥವಾ ತೆಗೆದುಹಾಕಲು ಬಯಸಿದರೆ ಎಡಿಟ್ ಮಾಡಲು ಅನುವು ಮಾಡುವ ಫೀಚರ್ ಸಹಾಯಕ್ಕೆ ಬರುತ್ತದೆ. ಈ ಫೀಚರ್ ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಎಂದು ತೋರುತ್ತಿದೆ. ಆದರೆ ಇತ್ತೀಚೆಗೆ iOS 23.4.0.72 ಗಾಗಿ ಇರುವ ವಾಟ್ಸ್ಆ್ಯಪ್ ಬೀಟಾದಲ್ಲಿ ಈ ಫೀಚರ್ಅನ್ನು ಗುರುತಿಸಲಾಗಿದೆ. ಇದನ್ನು TestFlight ಪ್ರೋಗ್ರಾಂನಲ್ಲಿ ನೋಂದಾಯಿಸಿದವರಿಗೆ ಬಿಡುಗಡೆ ಮಾಡಲಾಗಿದೆ.
ಪ್ರಸ್ತುತ, ನೀವು ವಾಟ್ಸ್ಆ್ಯಪ್ನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದರೆ, ಎಡಿಟ್ ಮಾಡಿದ ಸಂದೇಶವು ಗೋಚರಿಸುವುದಿಲ್ಲ. ಆದರೆ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಆವೃತ್ತಿ ಹೊಸ ಫೀಚರ್ಗಳಿಗೆ ಸಪೋರ್ಟ್ ಮಾಡುವುದಿಲ್ಲ ಎಂದು ಹೇಳುವ ಅಲರ್ಟ್ ಪಡೆಯುತ್ತಾರೆ. (ಏಜೆನ್ಸೀಸ್)