

ನವದೆಹಲಿ: ನವದೆಹಲಿ: ತನ್ನ ಕೆನಡಾದ ಪೌರತ್ವದ ಬಗ್ಗೆ ಆಗಾಗ್ಗೆ ಟೀಕೆಗಳನ್ನು ಎದುರಿಸುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಭಾರತವೇ ತನಗೆ ಸರ್ವಸ್ವ ಎಂದು ಹೇಳುತ್ತಾ ತಮ್ಮ ನಾಗರೀಕತ್ವ ಬದಲಾವಣೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
“ಭಾರತವೇ ನನಗೆ ಸರ್ವಸ್ವ... ನಾನು ಗಳಿಸಿದ್ದೆಲ್ಲವೂ ಇಲ್ಲಿಂದಲೇ” ಎಂದು 55 ವರ್ಷದ ತಾರೆ ಅಕ್ಷಯ್ ಕುಮಾರ್ ಆಜ್ ತಕ್ನಲ್ಲಿ ಸೀಧಿ ಬಾತ್ನ ಹೊಸ ಸೀಸನ್ನ ಮೊದಲ ಸಂಚಿಕೆಯಲ್ಲಿ ಹೇಳಿದರು.
ಹೇರಾ ಫೇರಿ, ನಮಸ್ತೆ ಲಂಡನ್, ಟಾಯ್ಲೆಟ್: ಏಕ್ ಪ್ರೇಮ್ ಕಥಾ ಮತ್ತು ಪ್ಯಾಡ್ಮ್ಯಾನ್ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾಗಿರುವ ಅಕ್ಷಯ್ ಕುಮಾರ್, ಅವರು 15 ಕ್ಕೂ ಹೆಚ್ಚು ಫ್ಲಾಪ್ ಚಿತ್ರಗಳನ್ನು ನೀಡಿದ್ದು ಅವರ ವೃತ್ತಿಜೀವನದ ದುರ್ಬಲ ಹಂತದ ಬಗ್ಗೆ ಮಾತನಾಡಿದರು. ಇದು 1990ರ ದಶಕದಲ್ಲಿ. ಅವರ ಚಲನಚಿತ್ರಗಳ ಸೋಲು ಕೆನಡಾದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸುವಂತೆ ಮಾಡಿತು ಎಂದು ನಟ ಹೇಳಿದರು.
ನನ್ನ ಸ್ನೇಹಿತನ ಬಳಿ “ಭಾಯ್, ನನ್ನ ಚಿತ್ರಗಳು ವರ್ಕ್ ಆಗುತ್ತಿಲ್ಲ'' ಎಂದು ನಾನು ಕೆಲಸದ ನಿಮಿತ್ತ ಕೆನಡಾಗೆ ಹೋಗಿದ್ದಾಗ ಹೇಳಿದ್ದೆ. ಅದಕ್ಕೆ ನನ್ನ ಸ್ನೇಹಿತ ಇಲ್ಲಿಗೆ ಬಾ ಎಂದು ಹೇಳಿದನು. ನಾನು ಅರ್ಜಿ ಸಲ್ಲಿಸಿ ಕೆನಡಾದ ಪ್ರಜೆಯಾದೆ.
ಆಗ ಬಿಡುಗಡೆಗೆ ಕೇವಲ ನನ್ನ ಎರಡು ಚಿತ್ರಗಳು ಉಳಿದಿದ್ದವು. ಅದೃಷ್ಟವಶಾತ್ ಅವೆರಡೂ ಸೂಪರ್ಹಿಟ್ ಆಗಿದ್ದವು. ಸುದ್ದಿ ಕೇಳಿದ ನನ್ನ ಸ್ನೇಹಿತ ಹಿಂತಿರುಗಿ, ಮತ್ತೆ ಕೆಲಸ ಪ್ರಾರಂಭಿಸಲು ಹೇಳಿದ್ದ. ಇದಾದ ಮೇಲೆ ನನಗೆ ಇನ್ನೂ ಕೆಲವು ಚಿತ್ರಗಳು ಸಿಕ್ಕಿ ಹೆಚ್ಚು ಕೆಲಸ ಮಾಡಿದೆ. ನನ್ನ ಬಳಿ ಪಾಸ್ಪೋರ್ಟ್ ಇದೆ ಎಂಬುದೇ ಮರೆತುಹೋಗಿತ್ತು. ನಾನು ಈ ಪಾಸ್ಪೋರ್ಟ್ ಅನ್ನು ಬದಲಾಯಿಸಬೇಕು ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಆದರೆ ಈಗ ಹೌದು, ನನ್ನ ಪಾಸ್ಪೋರ್ಟ್ ಬದಲಾಯಿಸಲು ನಾನು ಅರ್ಜಿ ಸಲ್ಲಿಸಿದ್ದೇನ' ಎಂದು ಅಕ್ಷಯ್ ಕುಮಾರ್ ಸಂದರ್ಶನದಲ್ಲಿ ಹೇಳಿದ್ದಾರೆ.