ನವದೆಹಲಿ: ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಝೋರಂತಂಗ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್)ಗೆ ಆರು ಪಕ್ಷಗಳ ಮೈತ್ರಿಯ ರೂಪದಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ಝಡ್ಪಿಎಂ) ತೀವ್ರ ಪೈಪೋಟಿ ನೀಡಿರುವುದನ್ನು ಮತಗಟ್ಟೆ ಸಮೀಕ್ಷೆಗಳು ತೋರಿಸಿವೆ. ಈ ಎರಡೂ ಬಣಗಳ ನಡುವೆ ಯಾರಾದರೂ ಅಧಿಕಾರಕ್ಕೆ ಬರಬಹುದಾಗಿದೆ.
2018ರ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಪಕ್ಷ ಎಂಎನ್‌ಎಫ್ ಕಿಟ್ಟಿಯಲ್ಲಿ 26 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿತ್ತು.