ನ್ಯೂಸ್

ಈ ದಿನದೊಳಗೆ ಶಾಶ್ವತ ಪಟಾಕಿ ನಿಷೇಧ ಹೇರಿ: ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸೂಚನೆ | Supreme Court

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನ.25ರೊಳಗೆ ಶಾಶ್ವತವಾಗಿ ಪಟಾಕಿ ನಿಷೇಧಿಸುವಂತೆ ಕರೆ ನೀಡಲು ಸುಪ್ರೀಂಕೋರ್ಟ್(​Supreme Court) ದೆಹಲಿ ಸರ್ಕಾರಕ್ಕೆ ಸೋಮವಾರ (ನ.11) ಖಡಕ್​ ಸೂಚನೆ ನೀಡಿದೆ.

ಇನ್ನೂ ವಾಯು ಮಾಲಿನ್ಯವನ್ನು ಪ್ರಚೋದಿಸುವ ಯಾವುದೇ ಚಟುವಟಿಕೆಯನ್ನು ಯಾವ ಧರ್ಮಗಳು ಮಾಡುವುದಿಲ್ಲ ಎಂದು ನಾವು ಗಮನಿಸಿದ್ದೇವೆ. ಅಲ್ಲದೆ, ''ಸಂವಿಧಾನದ 21ನೇ ಅಡಿಯಲ್ಲಿ ಮಾಲಿನ್ಯ ಮುಕ್ತ ವಾತಾರಣದಲ್ಲಿ ಬದುಕುವ ಹಕ್ಕು ಮೂಲಭೂತ ಹಕ್ಕು. ಹೀಗಾಗಿ, ಮಾಲಿನ್ಯವನ್ನು ಪ್ರಚೋದಿಸುವ ಯಾವುದೇ ಚಟುವಟಿಕೆಯನ್ನು ಯಾವ ಧರ್ಮಗಳು ಮಾಡುವುದಿಲ್ಲ'' ಎಂದು ನ್ಯಾಯಮೂರ್ತಿಗಳಾದ ಆಭಯ್​ ಎಸ್​.ಓಕಾ ಮತ್ತು ಅಗಸ್ಟಿನ್​ ಜಾರ್ಜ್​ ನ್ಯಾಯಪೀಠವು ಹೇಳಿದೆ.

ಆ.14ರಂದು ದೆಹಲಿ ಸರ್ಕಾರ ಜಾರಿಗೊಳಿಸಿದ 'ಪಟಾಕಿ ನಿಷೇಧ' ಆದೇಶವನ್ನು ಜಾರಿ ಮಾಡಲು, ಎಸ್​ಎಚ್​ಒ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಲು ಮತ್ತು ವಿಶೇಷ ಸೆಲ್​ ರಚಿಸಲು ದೆಹಲಿ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ. ''ನಿಷೇಧದ ಬಗ್ಗೆ ಎಲ್ಲಾ ಪಟಾಕಿ ತಯಾರಕರಿಗೆ ನೋಟಿಸ್ ನೀಡಬೇಕಿದೆಯೇ ಎಂದು ನ.25ರೊಳಗೆ ಪೊಲೀಸ್ ಆಯುಕ್ತರು ಅಫಿಡವಿಟ್ ಸಲ್ಲಿಸಬೇಕು ಅಲ್ಲದೆ, ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟಕ್ಕೆ ಕಡಿವಾಣ ಹಾಕಲು ತೆಗೆದುಕೊಂಡ ಕ್ರಮಗಳ ವಿವರಗಳನ್ನು ನೀಡುವಂತೆಯೂ'' ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ಎಲ್ಲ ರಾಜ್ಯಗಳು ತಮ್ಮ ರಾಜ್ಯದ ರಾಜಧಾನಿಗಳಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಕ್ಕೆ ತಿಳಿಸುವಂತೆ ಸುಪ್ರೀಂಕೋರ್ಟ್​ ತಿಳಿಸಿದೆ. ಅಲ್ಲದೆ, ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂಬುವುದು ಕೋರ್ಟ್​ ಗಮನಕ್ಕೆ ಬಂದಿದೆ ಎಂದು ನ್ಯಾಯಲಯದ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಪಟಾಕಿ ನಿಷೇಧದ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಕೋಶವನ್ನು ರಚಿಸುವಂತೆ ನಾವು ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸುತ್ತೇವೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್​).