ನ್ಯೂಸ್

ನಿಮ್ಮ ಮಕ್ಕಳು ಮೊಬೈಲ್ ಬಿಡ್ತಿಲ್ವಾ? ಹಾಗಿದ್ರೆ ಈ ವಿಡಿಯೋ ತೋರಿಸಿ...

ನವದೆಹಲಿ: ಇಂದಿನ ಮಕ್ಕಳೇ ಮುಂದಿನ ಪ್ರಜೆ. ಪ್ರತಿಯೊಂದು ದೇಶದ ಭವಿಷ್ಯವು ಮಕ್ಕಳು ಮತ್ತು ಯುವಕರ ಕೈಯಲ್ಲಿದೆ. ಆದರೆ ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳೂ ಫೋನ್ ಇಲ್ಲದೆ ಆಹಾರವನ್ನು ಸಹ ತಿನ್ನುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಫೋನಿಗೆ ದಾಸರಾಗಿದ್ದಾರೆ. ಹಾಗಿದ್ರೆ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊ ನಿಮಗೆ ಸಹಾಯ ಮಾಡುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಚೀನಾದ ಶಾಲೆಯೊಂದರದ್ದು ಎನ್ನಲಾಗಿದೆ. ಇದರಲ್ಲಿ ವಿಡಿಯೋ ಮೂಲಕ ಅಲ್ಲಿನ ಮಕ್ಕಳಿಗೆ ಶಿಕ್ಷಣದ ಮಹತ್ವ ಹಾಗೂ ಫೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಲಾಗುತ್ತಿದೆ.

ವೀಡಿಯೊದಲ್ಲಿ ಏನಿದೆ?: ಹುಡುಗಿಗೆ ಫೋನ್ ಮತ್ತು ಪುಸ್ತಕದ ಆಯ್ಕೆಯನ್ನು ನೀಡಲಾಗುತ್ತದೆ. ಇದರಲ್ಲಿ ಹುಡುಗಿ ಫೋನ್ ಆಯ್ಕೆ ಮಾಡುತ್ತಾಳೆ. ಇದರ ನಂತರ, ಫೋನ್‌ನಲ್ಲಿ ಬ್ಯುಸಿಯಾಗಿದ್ದರಿಂದ ಅವಳು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳು ಸಾಧ್ಯವಾಗುತ್ತಿಲ್ಲ ಎಂಬುದನ್ನು ತೋರಿಸಲಾಗಿದೆ.

ಇದರ ನಂತರ ವೀಡಿಯೊದ ಎರಡನೇ ಭಾಗವು ಪ್ರಾರಂಭವಾಗುತ್ತದೆ. ಇಲ್ಲಿಯೂ ಹುಡುಗಿಗೆ ಫೋನ್ ಮತ್ತು ಪುಸ್ತಕದ ಆಯ್ಕೆಯನ್ನು ನೀಡಲಾಗಿದೆ.  ಈ ಬಾರಿ ಹುಡುಗಿ ಪುಸ್ತಕವನ್ನು ಆರಿಸಿಕೊಳ್ಳುತ್ತಾಳೆ. ಅಧ್ಯಯನದಿಂದ ಅವನ ಭವಿಷ್ಯವು ಹೇಗೆ ಯಶಸ್ವಿಯಾಗುತ್ತದೆ. ಅವಳು ಆಸೆ ಪಟ್ಟಂತೆ ಓದುತ್ತಾಳೆ. ಕೆಲಸಕ್ಕೆ ಸೆರುತ್ತಾಳೆ. ಹಣ ಸಂಪಾದನೆ ಮಾಡಿ ಬೇಕಾಗಿದ್ದೆಲ್ಲವನ್ನು ಖರೀದಿ ಮಾಡಿ ಖಷಿಯಿಂದ ಬದುಕುವುದನ್ನು ಎಂಬುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.

ಚೀನಾದ ಕೆಲವು ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಈ ವಿಡಿಯೋವನ್ನು ತೋರಿಸಲಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆದು ಸೋಶಿಯಲ್​ ಮೀಡಿಯಾ ಎಕ್ಸ್​​ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಮಾಜಕ್ಕೆ ಇದು ತುಂಬಾ ಅಗತ್ಯವಿದೆ. ಒಳ್ಳೆಯ ಸಂದೇಶ ಎಂದು ನೆಟ್ಟಿಗರು ಕಾಮೆಂಟ್​​  ಮಾಡುತ್ತಿದ್ದಾರೆ.