More

    ವಿಶ್ವದ ಅತ್ಯಂತ ದುಬಾರಿ ಹಾಲು! 1 ಲೀಟರ್​ ಇಲಿಯ ಹಾಲಿನ ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ

    ಬೆಳಗ್ಗೆ ಎದ್ದಾಗ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವುದು ಬಹುತೇಕರ ಹವ್ಯಾಸ. ನಾವು ಸಾಮಾನ್ಯವಾಗಿ ಎಮ್ಮೆಯ ಹಾಲು ಮತ್ತು ಹಸುವಿನ ಹಾಲನ್ನು ಹಾಲನ್ನು ಬಳಸುತ್ತೇವೆ. ಮೇಕೆ ಹಾಲನ್ನೂ ಕೂಡ ಸೇವಿಸಲಾಗುತ್ತದೆ. ಹೆಚ್ಚಾಗಿ, ಎಮ್ಮೆ ಮತ್ತು ಹಸುವಿನ ಹಾಲನ್ನು ಬಳಸುತ್ತೇವೆ. ಆದರೆ, ಒಂಟೆ ಹಾಲು, ಕತ್ತೆ ಹಾಲಿಗೂ ಬೇಡಿಕೆ ಇದೆ. ಈ ಹಾಲು ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿದ್ದು, ದುಬಾರಿ ಕೂಡ ಹೌದು.

    ಒಂಟೆ ಮತ್ತು ಕತ್ತೆಯ ಹಾಲಿನ ಬಗ್ಗೆ ಕೇಳಿ ಕೊಂಚ ಅಚ್ಚರಿಯೆನಿಸಬಹುದು. ಆದರೆ, ಅದಕ್ಕಿಂತ ಅಚ್ಚರಿಗೆ ದೂಡುವ ಇನ್ನೊಂದು ಹಾಲಿದೆ. ಅದೇ ತಾಜಾ ಇಲಿ ಹಾಲು. ಇದು ವಿಶ್ವದ ಅತ್ಯಂತ ದುಬಾರಿ ಹಾಲು. ಇಲಿ ಹಾಲು ಕೂಡ ಇದೆಯಾ? ಎಂಬ ಪ್ರಶ್ನೆ ಮೂಡಬಹುದು. ಅಲ್ಲದೇ, ಈ ಹಾಲಿನ ಬಗ್ಗೆ ಇದೇ ಮೊದಲ ಬಾರಿ ಕೇಳುತ್ತಿರಬಹದು. ಆದರೆ, ಇಲಿ ಹಾಲಿಗೆ ತುಂಬಾ ಬೇಡಿಕೆ ಇರುವುದಂತೂ ಸತ್ಯ. ಇಲಿ ಹಾಲನ್ನು ಏಕೆ ಬಳಸುತ್ತಾರೆ? ಅದರ ಬೆಲೆ ಎಷ್ಟು? ಎಲ್ಲಿ ಹೆಚ್ಚಾಗಿ ಬಳಸುತ್ತಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ.

    ಇಲಿ ಹಾಲಿನ ಬೆಲೆಯ ಬಗ್ಗೆ ತಿಳಿದರೆ ನಿಜಕ್ಕೂ ನಿಮಗೆ ಶಾಕ್​ ಆಗಬಹುದು. ಏಕೆಂದರೆ ಒಂದು ಲೀಟರ್ ಇಲಿಯ ಹಾಲಿನ ಬೆಲೆ 23 ಸಾವಿರ ಯೂರೋ ಅಂದರೆ, ಸುಮಾರು 18 ಲಕ್ಷ ರೂ. ಇದೆ. ಅಯ್ಯೋ 18 ಲಕ್ಷ ಹೂಡಿಕೆ ಮಾಡಿದರೆ ಒಂದು ಸಿಂಗಲ್ ಬೆಡ್ ರೂಂ ಮನೆಯನ್ನೇ ಖರೀದಿಸಬಹುದು. ಒಂದು ಬಿಸಿನೆಸ್​ ಆರಂಭಿಸಬಹುದು ಮತ್ತು ಊರಲ್ಲಿ ಅಷ್ಟೊಂದು ಹಣವಿದ್ದರೆ ಆತನೇ ರಾಜ ಅಂತೆಲ್ಲ ಮಾತನಾಡಿಕೊಳ್ಳಬಹುದು. ಏಕೆಂದರೆ, 18 ಲಕ್ಷ ರೂ. ಅಂದರೆ ಸಣ್ಣ ಮೊತ್ತವೇನಲ್ಲ. ಇಷ್ಟು ಚಿಕ್ಕ ಪ್ರಾಣಿಯ ಹಾಲು 18 ಲಕ್ಷ ರೂ. ಅಂದರೆ ಯಾರಿಗೆ ತಾನೇ ಆಶ್ಚರ್ಯವಾಗುವುದಿಲ್ಲ ಹೇಳಿ. ಮರಿ ಹುಟ್ಟಿದಾಗ ಇಲಿಯ ದೇಹದಲ್ಲಿ ಹಾಲಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಇನ್ನು ಒಂದು ಲೀಟರ್ ಇಲಿ ಹಾಲು ಸಂಗ್ರಹಿಸಬೇಕೆಂದರೆ ಹೇಗೆ ಸಾಧ್ಯ? ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ, 1 ಲೀಟರ್ ಇಲಿ ಹಾಲು ಸಂಗ್ರಹಿಸಲು 40 ಸಾವಿರ ಇಲಿಗಳು ಬೇಕಾಗುತ್ತದೆ!

    ಹಾಗಾದರೆ, ಈ ಇಲಿ ಹಾಲನ್ನು ಯಾವುದಕ್ಕೆ ಬಳಸುತ್ತಾರೆ ಅಂತಾ ನೋಡುವುದಾದರೆ, ಇಲಿ ಹಾಲನ್ನು ಸಂಶೋಧನೆಗೆ ಬಳಸಲಾಗುತ್ತದೆ. ಸಾಮಾನ್ಯವಾಗಿ, ವಿಜ್ಞಾನಿಗಳು ಇಲಿಗಳು, ಮಂಗಗಳು, ಹಂದಿಗಳು, ಮೊಲಗಳಂತಹ ಪ್ರಾಣಿಗಳ ಮೇಲೆ ತಮ್ಮ ಸಂಶೋಧನೆ ಮಾಡುತ್ತಾರೆ. ಇಲಿ ಹಾಲನ್ನು ವಿಜ್ಞಾನಿಗಳು ಸಂಶೋಧನೆಗೆ ಬಳಸುತ್ತಾರೆ.

    ಮಲೇರಿಯಾ ಬ್ಯಾಕ್ಟೀರಿಯಾವನ್ನು ಕೊಲ್ಲುವ ಔಷಧಿಗಳಲ್ಲಿ ಇಲಿ ಹಾಲನ್ನು ಬಳಸಲಾಗುತ್ತದೆ. ವಿಜ್ಞಾನಿಗಳು ಹಸುವಿನ ಹಾಲಿಗೆ ಬದಲಾಗಿ ಇಲಿಯ ಹಾಲನ್ನು ಬಳಸುತ್ತಾರೆ. ಎಮ್ಮೆಯ ಹಾಲಿಗಿಂತ ಹಸುವಿನ ಹಾಲಿನಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಎಂದು ತಜ್ಞರು ಹೇಳುತ್ತಾರೆ ಆದರೆ, ಇಲಿ ಹಾಲಿನಲ್ಲಿ ಹಸುವಿನ ಹಾಲಿಗಿಂತ ನಾಲ್ಕು ಪಟ್ಟು ಹೆಚ್ಚು ಪೋಷಕಾಂಶಗಳಿವೆ. ಹಾಗಾಗಿಯೇ ವಿಜ್ಞಾನಿಗಳು ಸಂಶೋಧನೆಗೆ ಹಸುವಿನ ಹಾಲಿನ ಬದಲು ಇಲಿ ಹಾಲನ್ನು ಬಳಸುತ್ತಿದ್ದಾರೆ.

    ಇಲಿಯ ಡಿಎನ್‌ಎ ಇತರ ಪ್ರಾಣಿಗಳ ಡಿಎನ್‌ಎಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಮಾನವ ದೇಹಕ್ಕೂ ಹೋಲುತ್ತದೆ. ಪ್ರಯೋಗವನ್ನು ನಡೆಸಲು, ಫಲಿತಾಂಶಗಳನ್ನು ವಿಶ್ಲೇಷಿಸಲು ಸುಲಭವಾಗುತ್ತದೆ. ಮಲೇರಿಯಾವನ್ನು ತಡೆಗಟ್ಟಲು, ಸಂಶೋಧನಾ ಸಾಮಗ್ರಿಗಳನ್ನು ತಯಾರಿಸಲು ಇಲಿ ಹಾಲನ್ನು ತಳೀಯವಾಗಿ ಬಳಸಲಾಗುತ್ತದೆ. ಹಾಗಾಗಿ ಇಲಿ ಹಾಲು ತುಂಬಾ ದುಬಾರಿ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇಲಿ ಹಾಲಿನ ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

    ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

    ಎಲ್ಲಾ ಹೀರೋಗಳ ಜತೆ ಮಾಡಿದ್ದೇನೆ, ಆದ್ರೆ ಈಗ ನನ್ನ ಜೀವನ ಹೀಗಾಗುತ್ತೆ ಅಂದು ಕೊಂಡಿರಲಿಲ್ಲ ಎಂದ ಖ್ಯಾತ ನಟಿ

    ಶೂಟಿಂಗ್​ ವೇಳೆ ಹಾವು ಕಚ್ಚಿ ಒಬ್ಬ ಸತ್ತೇ ಹೋದ; ದೇವಿ ಚಿತ್ರದ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಪ್ರೇಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts