ನ್ಯೂಸ್

ಮುಂದಿನ 3-4 ದಿನಗಳು ಈ ರಾಜ್ಯಗಳಲ್ಲಿ ಸುರಿಯಲ್ಲಿದೆ ಭಾರೀ ಮಳೆ! ಹವಾಮಾನ ಇಲಾಖೆ ಮುನ್ಸೂಚನೆ

ಮೋಹನ್​ ಶೆಟ್ಟಿ

ಹೊಸದಿಲ್ಲಿ: ಇಂದಿನಿಂದ ಫೆಬ್ರವರಿ 21ರವರೆಗೆ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಭಾರೀ ಮಳೆ/ಹಿಮಪಾತ ಸಾಧ್ಯತೆ ಹೆಚ್ಚಿದ್ದು, ಕೆಲವು ರಾಜ್ಯಗಳಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಇದೀಗ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಭಾರೀ ಹಿಮಪಾತ ಮತ್ತು ಮಳೆಯಾಗಲಿದ್ದು, ಪಶ್ಚಿಮ ಹಿಮಾಲಯ ಪ್ರದೇಶದಲ್ಲಿನ ಹವಾಮಾನದಲ್ಲಿನ ಬದಲಾವಣೆ ಇರಲಿದೆ ಎಂದು ಹೇಳಲಾಗಿದೆ.

ಇಂದು ಜಮ್ಮು ಮತ್ತು ಹಿಮಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 20ರವರೆಗೆ ಆಲಿಕಲ್ಲು ಬೀಳುವ ಸಾಧ್ಯತೆ ಇದೆ. ಇದರೊಟ್ಟಿಗೆ ಫೆಬ್ರವರಿ 21ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಪ್ರತ್ಯೇಕವಾದ ಲಘು/ಮಧ್ಯಮ ಮಳೆ ಬೀಳುವ ಮುನ್ಸೂಚನೆ ಇದೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಹವಾಮಾನ ಇಲಾಖೆಯು ಸೋಮವಾರ (ಫೆ.19) ರಾಷ್ಟ್ರ ರಾಜಧಾನಿಯಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆ, ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಮಂಗಳವಾರ, ಬುಧವಾರ ಸಾಧಾರಣ ಅಥವಾ ತುಂತುರು ಮಳೆಯ ಮುನ್ಸೂಚನೆಯಿದೆ ಎಂದು ತಿಳಿಸಿದೆ,(ಏಜೆನ್ಸೀಸ್).