ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಸ್ತಿ ಸಮಸ್ಯೆಗಳು ಬಗೆಹರಿಯುವುದು

Nithya Bhavishya
Published on

ಮೇಷ: ದಿನಸಿ ವ್ಯಾಪಾರಿಗಳಿಗೆ ನಷ್ಟ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ. ಶುಭಸಂಖ್ಯೆ: 4

ವೃಷಭ: ಭಡ್ತಿಗೆ ಹಲವು ಅಡೆತಡೆ. ಆಸ್ತಿ ಸಮಸ್ಯೆಗಳು ಬಗೆಹರಿಯುವುದು. ಸಹೋದರಿಯಿಂದ ಅನುಕೂಲ. ರಾಜಕೀಯ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 6

ಮಿಥುನ: ಉದ್ಯೋಗ ಸ್ಥಳ ಮತ್ತು ಗೃಹ ಬದಲಾವಣೆಗೆ ಮನಸ್ಸು. ಮಾತಿನಿಂದ ಕುಟುಂಬಸ್ಥರಿಗೆ ನೋವು ಉಂಟಾದೀತು. ಗುಪ್ತ ಧನಾಗಮನ. ಶುಭಸಂಖ್ಯೆ: 8

ಕಟಕ: ವ್ಯವಹಾರ ಕ್ಷೇತ್ರದಲ್ಲಿ ಧನಾಗಮನ. ಅನಗತ್ಯ ತಿರುಗಾಟ ಮಾಡುವಿರಿ. ಧೈರ್ಯ, ಶೌರ್ಯ, ದಿಟ್ಟತನದಿಂದ ಕಾರ್ಯಸಾಧನೆ. ಶುಭಸಂಖ್ಯೆ:7

ಸಿಂಹ: ಆದಾಯ -ನಷ್ಟ ಸಮ. ಪತ್ರಿಕೋದ್ಯಮಿ, ಸಾಹಿತಿಗಳಿಗೆ ಉತ್ತಮ ಗೌರವ, ಕೀರ್ತಿ ಸಿಗಲಿದೆ. ಆರ್ಥಿಕ ಒತ್ತಡಗಳಿಂದ ನಿದ್ರಾಭಂಗ. ಶುಭಸಂಖ್ಯೆ: 3

ಕನ್ಯಾ: ಮಗಳ ವಿವಾಹ ವಿಷಯದಲ್ಲಿ ಗೊಂದಲಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಒತ್ತಡ. ನಷ್ಟ ಅಧಿಕ. ಅಧಿಕಾರಿಗಳಿಂದ ಸಂಕಷ್ಟ. ಶುಭಸಂಖ್ಯೆ: 5

ತುಲಾ: ಉದ್ಯೋಗ ಲಾಭ. ಅದೃಷ್ಟ ವಂಚಿತ ಭಾವನೆ ಕಾಡೀತು. ಮೆಡಿಕಲ್ ವಿದ್ಯಾರ್ಥಿಗಳಿಗೆ ಹೆಚ್ಚಿದ ಒತ್ತಡ. ಭೂ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 5

ವೃಶ್ಚಿಕ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಶುಭದಾಯಕ ದಿನ. ಮಿತ್ರರಿಂದ ಅದೃಷ್ಟ. ಉತ್ತಮ ಹೆಸರು, ಗೌರವ, ಕೀರ್ತಿ, ಪ್ರತಿಷ್ಠೆ. ಶುಭಸಂಖ್ಯೆ: 6

ಧನಸ್ಸು: ಅನಿರೀಕ್ಷಿತ ಗಣ್ಯರ ಭೇಟಿ. ಪೂರ್ವಿಕರ ಕರ್ಮ ಕಾರ್ಯದಲ್ಲಿ ತೊಡಗುವಿರಿ. ಪ್ರಯಾಣದಲ್ಲಿ ತೊಂದರೆ. ಉದ್ಯೋಗ ಸಮಸ್ಯೆ. ಶುಭಸಂಖ್ಯೆ:6

ಮಕರ: ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ಲಾಭ. ಅನಿರೀಕ್ಷಿತ ತಿರುವು. ಸಂಗಾತಿಯೊಂದಿಗೆ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 4

ಕುಂಭ: ಆರೋಗ್ಯ ಸಮಸ್ಯೆ ಕಾಡುವುದು. ನೀರಿನಿಂದ ಮತ್ತು ಆಹಾರದಿಂದ ಸಮಸ್ಯೆ. ಅಧಿಕಾರಿಗಳಿಂದ, ಸರ್ಕಾರದಿಂದ ತೊಂದರೆ. ಶುಭಸಂಖ್ಯೆ:4

ಮೀನ: ಪ್ರೇಮದ ವಿಷಯದಲ್ಲಿ ಅಡಚಣೆ. ಅಪರಿಚಿತರಿಂದ ಮೋಸ ಹೋಗುವಿರಿ. ಸಾಲದ ಸಮಸ್ಯೆ, ಶತ್ರು ಬಾಧೆ. ಬಂಧುಗಳ ವಿಯೋಗ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net