ನ್ಯೂಸ್

ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದ!

ರಾಮನಗರ: ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯನ್ನು ಕನಕಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನಕಪುರ ತಾಲೂಕಿನ ಕಬ್ಬಾಳಯ್ಯನ ದೊಡ್ಡಿ ಗ್ರಾಮದ ಮಹದೇವ ಬಂಧಿತ ಆರೋಪಿ.

ಖಚಿತ ಮಾಹಿತಿ ಮೇರೆಗೆ ಕೋಡಿಹಳ್ಳಿ ಪೊಲೀಸರ ದಾಳಿ ಮಾಡಿದಾಗ ಬಂಧಿಯ ವ್ಯಕ್ತಿ ಮಹದೇವ ಮನೆಯ ಹಿಂಭಾಗದಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಪರಿಶೀಲಿಸಿದ ಪೊಲೀಸರು 2ಕೆ.ಜಿ 740 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿ ನಡೆಸಿ ಪರೀಶಿಲಿಸಿದಾಗ ಕುರಿ, ಮೇಕೆಗಳನ್ನು ಕಟ್ಟುವ ಕೊಪ್ಪಲಿನ ಹಿಂಭಾಗದಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ತಾನು ಗಾಂಜಾ ಬೆಳೆಯುವುದು ಯಾರ ಗಮನಕ್ಕೂ ಬರಬಾರದೆಂದು ಆರೋಪಿ ಸುತ್ತಲೂ ಸೀರೆ ಕಟ್ಟಿದ್ದ. ಗೊಬ್ಬರ ಹಾಕಿ ಬೆಳೆಸಿದ್ದ ಜಾಗದಲ್ಲಿ 2 ಹಸಿ ಗಾಂಜಾ ಗಿಡಗಳು ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.