ದುಬೈ: ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು(IIFA 2024) ಅಬುಧಾಬಿಯಲ್ಲಿ ನಡೆಯುತ್ತಿರುವುದು ಗೊತ್ತೆ ಇದೆ. ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯಳೊಂದಿಗೆ ಕಾಣಿಸಿಕೊಂಡರು. ಇತ್ತೀಚಿನ ದಿನಗಳಲ್ಲಿ ಐಶ್ವರ್ಯಾ ರೈ ಬಚ್ಚನ್ ಎಲ್ಲಿಗೆ ಹೋದರೂ, ಅವರ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ನೆರಳಿನಂತೆ ಕಾಣುತ್ತಾರೆ. ಇದರಿಂದಾಗಿ ಆರಾಧ್ಯ ಮತ್ತು ಐಶ್ವರ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಟ್ರೋಲ್‌ಗೆ ಒಳಗಾಗಿರುವುದನ್ನು ನೋಡಿದ್ದೇವೆ.
ಇದನ್ನು ಓದಿ: ಡೇಟಿಂಗ್ ಕುರಿತು ಪ್ರಸ್ತಾಪಿಸಿದ ಯುವರಾಜ್ ಸಿಂಗ್ಗೆ ನೆಟ್ಟಿಗರು ಕ್ಲಾಸ್; ಯುವಿ ಹೇಳಿದ್ದೇನು | Yuvraj Singh Dating
ಕಳೆದ ರಾತ್ರಿ ಅಬುಧಾಬಿಯಲ್ಲಿ ನಡೆಯುತ್ತಿರುವ IIFA ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗ್ರೀನ್ ಕಾರ್ಪೆಟ್ ಮೇಲೆ ತಮ್ಮ ಮಗಳ ಜತೆ ಪೋಸ್ ನೀಡಿದ ಐಶ್ವರ್ಯಾ ಮಾಧ್ಯಮದವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಇದೇ ವೇಳೆ ನಟಿ ಐಶ್ವರ್ಯಾ ಅವರಿಗೆ ಹೆಣ್ಣು ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಏನಾದರೂ ಸಲಹೆ ನೀಡುತ್ತೀರಾ ಎಂದು ಕೇಳಲಾಯಿತು.
ಇದಕ್ಕೆ ಉತ್ತರಿಸಿದ ನಟಿ ಐಶ್ವರ್ಯಾ, ನೀವು ತಾಯಿ ಮತ್ತು ನಿಮಗೆ ಹೆಚ್ಚು ತಿಳಿದಿದೆ. ನಾವೆಲ್ಲರೂ ಮನುಷ್ಯರು, ಒಬ್ಬರಿಗೊಬ್ಬರು ಕುಳಿತು ಸಲಹೆ ನೀಡಲಾಗುವುದಿಲ್ಲ. ಈ ಬಗ್ಗೆ ತಾಯಂದಿರಿಗೆ ಯಾವುದೇ ನೋಟ್ಬುಕ್ ಅಥವಾ ರೂಲ್ ಬುಕ್ ಇರುವುದಿಲ್ಲ. ಆದ್ದರಿಂದ ನೀವು ನಿಮ್ಮ ಇಚ್ಛೆಯಂತೆಯೇ ಮಾಡುತ್ತೀರಿ ಎಂದು ಹೇಳಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಕೆಲ ದಿನಗಳಿಂದ ವಿಚ್ಛೇದನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅಭಿಷೇಕ್ ಬಚ್ಚನ್ ಜತೆಗಿನ ಸಂಬಂಧ. ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಮಾತು ಕೇಳಿ ಬರುತ್ತಿದೆ. ಐಶ್ವರ್ಯಾ ಇತ್ತೀಚೆಗೆ ತಮ್ಮ ಮದುವೆಯ ಉಂಗುರದ ಜತೆಗೆ ಕಾಣಿಸಿಕೊಂಡ ಬಳಿಕ ವಿಚ್ಛೇದನದ ಸುದ್ದಿ ಕೇವಲ ವದಂತಿಯಾಗಿದ್ದು ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಈ ವಿಷಯಗಳ ಬಗ್ಗೆ ಅಭಿಷೇಕ್ ಮತ್ತು ಐಶ್ವರ್ಯಾ ಅವರಿಂದ ಯಾವುದೇ ಹೇಳಿಕೆ ಬಂದಿಲ್ಲ.(ಏಜೆನ್ಸೀಸ್)