ನ್ಯೂಸ್

IIFA 2024| ಬಾಲಿವುಡ್​​ ಕಿಂಗ್​ ಖಾನ್​ ನ್ಯೂಲುಕ್​ಗೆ ಅಭಿಮಾನಿಗಳು ಫಿದಾ; ಡ್ಯಾಶಿಂಗ್​ ಎಂದ ಫ್ಯಾನ್ಸ್​​​

ದುಬೈ: ಬಾಲಿವುಡ್​​ ಕಿಂಗ್​ಖಾನ್​​ ಶಾರೂಖ್​​ ಖಾನ್​​ ಅವರನ್ನು ಅವರ ನಟನೆ ಹಾಗೂ ಸರಳತೆಯನ್ನು ಆಗಾಗ್ಗೆ ಅಭಿಮಾನಿಗಳು ಕೊಂಡಾಡುತ್ತಿರುತ್ತಾರೆ. ಸದ್ಯ ಶಾರೂಖ್​​ ಅಬುಧಾಬಿಯಲ್ಲಿದ್ದಾರೆ. ವೈಯಕ್ತಿಕ ಪ್ರವಾಸದಲ್ಲಿದ್ದಾರೆ ಎಂದು ಆಲೋಚಿಸಬೇಡಿ ಅವರು ವೃತ್ತಿಯ ಭಾಗವಾಗಿ ಅಬುಧಾಬಿಯಲ್ಲಿ ಇದ್ದಾರೆ. ಹೌದು ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು(IIFA 2024) ಇಂದಿನಿಂದ (ಸೆಪ್ಟೆಂಬರ್ 27) ಆರಂಭವಾಗಿದೆ. ಕಾರ್ಯಕ್ರಮವನ್ನು ಆಯೋಜಿಸುವ ಸಲುವಾಗಿ ಒಂದು ದಿನ ಮುಂಚಿತವಾಗಿ ತಲುಪಿದ್ದರು. ಅವರ ಉಪಸ್ಥಿತಿಯು ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.ಅದ್ಧೂರಿ ಕಾರ್ಯಕ್ರಮಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಸದ್ಯ ಶಾರೂಖ್​ ಖಾನ್​ ಅವರ ಫೋಟೋವೊಂದು ವೈರಲ್​ ಆಗುತ್ತಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದೆ. ಫೋಟೋದಲ್ಲಿ ಶಾರೂಖ್​​ ಅವರ ಲುಕ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಕಳೆದ ವರ್ಷದಿಂದ ಯಾವುದೇ ಕಾರ್ಯಕ್ರಮದಲ್ಲಾದರೂ ಅವರನ್ನು ಉದ್ದನೆಯ ಹೇರ್​ಸ್ಟೈಲ್​​ನೊಂದಿಗೆ ಕಾಣಿಸಿದ್ದಾರೆ. ಆದರೆ ಅವರ ಹೊಸ ಹೇರ್​​ಕಟ್​ ಅಭಿಮಾನಿಗಳುನ್ನು ಸೆಳೆಯುತ್ತಿದೆ. ಶಾರೂಖ್​ ಅವರ ಕ್ಯಾಶುಯಲ್​​ ಲುಕ್​​ ನೋಡಿ ಅಭಿಮಾನಿಗಳು ಖುಷಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.

ಉಫ್, ಶಾರೂಖ್​ ಅವರ ಈ ನ್ಯೂ ಹೇರ್​ಕಟ್​​ ಅವರ ಹಳೇ ನೋಟವನ್ನು ನೆನಪಿಸುತ್ತದೆ. ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ. ಕಿಂಗ್​ ಖಾನ್​ ಹೊಸ ಹೇರ್​ಸ್ಟೈಲ್​​​ ಲುಕ್​ ಲೈಕ್​​ ಎ ಫೈರ್​​. ಅವರು ಯಾವಾಗಲೂ ಡ್ಯಾಶಿಂಗ್ ಆಗಿಯೇ ಕಾಣುತ್ತಾರೆ. ನಾನು ನಿಮ್ಮ ಲಾಂಗ್​ ಹೇರ್​ಸ್ಟೈಲ್​ ಅನ್ನು ಮಿಸ್​ ಮಾಡಿಕೊಳ್ಳುತ್ತೇನೆ. ಯಾವುದೇ ಲುಕ್​ ಇದ್ದರೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಕಾಮೆಂಟ್​ ಮಾಡಿದ್ದಾರೆ.

ಭಾರತೀಯ ಚಿತ್ರರಂಗದ ಶ್ರೇಷ್ಠತೆಯನ್ನು ಕೊಂಡಾಡುವ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು ಇಂದಿನಿಂದ ಆರಂಭವಾಗಿದ್ದು, ಮೂರು ದಿನಗಳ ಕಾಲ ಅಂದರೆ ಸೆಪ್ಟೆಂಬರ್​ 29ರವರೆಗೆ ನಡೆಯಲಿದೆ. ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯಲಿದೆ. ಶಾರೂಖ್ ಖಾನ್, ವಿಕ್ಕಿ ಕೌಶಲ್ ಮತ್ತು ಕರಣ್ ಜೋಹರ್ ಒಟ್ಟಿಗೆ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಶಾರೂಖ್​ ಖಾನ್​​ ಅವರು ಕೊನೆಯದಾಗಿ ವಿಕ್ಕಿ ಕೌಶಲ್ ಅವರೊಂದಿಗೆ 'ಡಂಕಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್​​)