Weight gain Recipe: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವಂತಹ ಒತ್ತಡ, ಸಮಯದ ಅಭಾವ, ಮಾನಸಿಕ ಖಿನ್ನತೆ ಈ ರೀತಿಯಂತಹ ಸಮಸ್ಯೆಗಳಿಂದಾಗಿ ಮಾನವನು ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಅಂತಹ ಸಂದರ್ಭದಲ್ಲಿ ತೂಕ ಏರಿಸಿಕೊಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಆದರೂ ತೂಕ ಹೆಚ್ಚಿಸುವಲ್ಲಿ ವಿಫಲವಾಗಿರುತ್ತಾರೆ. ಅಂತವರು ಪೌಷ್ಟಿಕಾಂಶ ತುಂಬಿರುವಂತಹ ಆಹಾರಗಳನ್ನು ಸೇವಿಸುವುದರಿಂದ ತೂಕವನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಈ ಪ್ರೊಟೀನ್ ಪನ್ನೀರ್ ರೋಲ್ ಸೇವಿಸಿ...
* 200 ಗ್ರಾಂ ಪನ್ನೀರ್
* 1 ಕಪ್ ಗೋಧಿ ಹಿಟ್ಟು
* 50 ಗ್ರಾಂ ಚೀಸ್
* ಪುದೀನಾ ಸೊಪ್ಪು
* ಕೊತ್ತುಂಬರಿ ಸೊಪ್ಪು
* ಉಪ್ಪು
* ಮೆಣಸಿನಕಾಯಿ
* ಜೀರಿಗೆ
* 2 ಚಮಚ ಹಾಲು
* ಐಚ್ಛಿಕ (ಟೊಮ್ಯಾಟೊ, ಬಾದಾಮಿ, ಬೇಬಿ ಕಾರ್ನ್)
ಇದನ್ನೂ ಓದಿ: ಲೇಟಾದರೂ ಲೇಟೆಸ್ಟ್ ರಕ್ತ ಕಾಶ್ಮೀರ; ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಉಪೇಂದ್ರ, ರಮ್ಯಾ ನಟಿಸಿರುವ ಚಿತ್ರ
ಮೊದಲು ಒಂದು ಬೌಲ್ ತೆಗೆದುಕೊಳ್ಳಿ ಅದಕ್ಕೆ ಗೋಧಿ ಹಿಟ್ಟು ಹಾಕಿ 1 ಚಮಚ ಬೆಣ್ಣೆ ಹಾಗೂ ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿರಿ 10 ನಿಮಿಷ ನೆನೆಯಲು ಬಿಡಿ. ನಂತರ ಮತ್ತೊಂದು ಬೌಲ್ಗೆ ಸಣ್ಣಗೆ ಕತ್ತರಿಸಿದ ಪನ್ನೀರ್, ಉಪ್ಪು, ಮೆಣಸಿನಕಾಯಿ, ಜೀರಿಗೆ, ಚೀಸ್, ಬೇಬಿ ಕಾರ್ನ್ ಸೇರಿಸಿ ಬೇಯಿಸಿ ನಂತರ ಮಿಶ್ರಣ ಮಾಡಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಕಲಸಿರಿ.
ಈಗ ಹಿಟ್ಟನ್ನು ತೆಗೆದುಕೊಂಡು ಅದನ್ನು ದುಂಡಾಕಾರದಲ್ಲಿ ರೊಟ್ಟಿಯನ್ನು ಉದ್ದಿಕೊಂಡು ಬೇಯಿಸಿಕೊಳ್ಳಿ. ನಂತರ, ಅದಕ್ಕೆ ಮಾಡಿಟ್ಟುಕೊಂಡಿರುವ ಮಸಾಲವನ್ನು ಹಾಕಿ ರೋಲ್ ಮಾಡಿ ಸೇವಿಸಿರಿ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.