ಕಾಂಗ್ರೆಸ್​ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ; ಬದಲಾಗಿ, ಭಯೋತ್ಪಾದಕರಿಗೆ ಬಿರಿಯಾನಿ ನೀಡಿತು: ಅಮಿತ್​ ಷಾ ವಾಗ್ದಾಳಿ | Amit Shah

Amit Shah
Published on

ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಎರೆಡುವರೆ ವರ್ಷಗಳ ಒಳಗೆ ಭವ್ಯವಾದ ಸೀತಾ ಮಾತಾ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಗುರುವಾರ (ನ.6) ಘೋಷಿಸಿದ್ದಾರೆ.

ಈ ಬಗ್ಗೆ ಬಿಹಾರದ ಮಧುಬನಿಯಲ್ಲಿ ನಡೆದ ಚುನಾವಣಾ ಱಲಿಯಲ್ಲಿ ಮಾತನಾಡಿದ ಷಾ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ಕೂಡ ದೇವಾಲಯ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಅಲ್ಲದೆ, ಮುಂದುವರೆದು ಮಾತನಾಡಿದ ಷಾ, ಲಾಲು ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದ್ದರು. ಬಾಬರ್ ರಾಮ ಮಂದಿರವನ್ನು ಕೆಡವಿದ, ಮೊಘಲರು ಅದರ ಪುನರ್ನಿರ್ಮಾಣವನ್ನು ನಿಲ್ಲಿಸಿದರು, ಬ್ರಿಟಿಷರು ಅದನ್ನು ವಿಳಂಬ ಮಾಡಿದರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಡೆದರು. ನಂತರ ಲಾಲು ಪ್ರಸಾದ್ ಯಾದವ್ ಅದನ್ನು ವಿರೋಧಿಸಿದರು ಎಂದು ಅಮಿತ್​ ಷಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅದರೆ, 2019 ರಲ್ಲಿ, ನೀವು ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತೆ ಆಯ್ಕೆ ಮಾಡಿದ್ದೀರಿ, ರಾಮ ಮಂದಿರವನ್ನು ನಿರ್ಮಿಸುವ ಮೂಲಕ ದೀರ್ಘಕಾಲದ ಭರವಸೆಯನ್ನು ಈಡೇರಿಸಿದ್ದಾರೆ. ಅಲ್ಲದೆ, ಈಗ ತಾಯಿ ಸೀತಾಗೆ ಅರ್ಪಿತವಾದ ಭವ್ಯ ದೇವಾಲಯವನ್ನು ನಿರ್ಮಿಸಲು ಸಜ್ಜಾಗಿದ್ದೇವೆ. ನಿತೀಶ್ ಕುಮಾರ್ ಮತ್ತು ನಾನು ಈಗಾಗಲೇ ಭೂಮಿ ಪೂಜೆಯನ್ನು ಮಾಡಿದ್ದೇವೆ. ಇದು ಸಂಭವಿಸುವುದನ್ನು ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ತಡೆಯಲು ಸಾಧ್ಯವಿಲ್ಲ”ಎಂದು ಷಾ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಹೊಡೆಯುವ ಪ್ರತಿಯೊಂದು ಶೆಲ್ ಮಿಥಿಲಾದಲ್ಲಿ ತಯಾರಿಸಲಾಗುತ್ತದೆ- ಷಾ

ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತದ ಭೂಪ್ರದೇಶಕ್ಕೆ ನುಸುಳುವ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ಪಹಲ್ಗಾಮ್ ದಾಳಿಯ 20 ದಿನಗಳಲ್ಲಿ ಪ್ರಧಾನಿ ಮೋದಿ ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿದರು. ಅಲ್ಲದೆ, ಮಿಥಿಲಾದಲ್ಲಿ ರಕ್ಷಣಾ ಕಾರಿಡಾರ್ ನಿರ್ಮಿಸಲಾಗುವುದು ಎಂದು ಷಾ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ, ಸೋನಿಯಾ-ಮನಮೋಹನ್ ಆಡಳಿತದಲ್ಲಿ, ಪಾಕಿಸ್ತಾನಿ ಭಯೋತ್ಪಾದಕರು ಬಂದು ಬಾಂಬ್ ಸ್ಫೋಟಿಸಿ ಹೊರಟು ಹೋಗುತ್ತಿದ್ದರು. ಅದರೆ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ. ಬದಲಾಗಿ, ಭಯೋತ್ಪಾದಕರಿಗೆ ಬಿರಿಯಾನಿ ನೀಡಲಾಯಿತು ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಇತ್ತೀಚೆಗೆ, ಪಹಲ್ಗಾಮ್‌ನಲ್ಲಿ ನಮ್ಮ ಸೈನಿಕರು ಕೊಲ್ಲಲ್ಪಟ್ಟರು. ಪ್ರಧಾನಿ ಮೋದಿ ಕೇವಲ 20 ದಿನಗಳಲ್ಲಿ ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿದರು. ಇದರಲ್ಲಿ ನಾವು ಪಾಕಿಸ್ತಾನವನ್ನು ಪ್ರವೇಶಿಸಿ ಭಯೋತ್ಪಾದಕರನ್ನು ನಿರ್ನಾಮ ಮಾಡಿದ್ದೇವೆ. ಈಗ, ಭಯೋತ್ಪಾದಕರು ಗುಂಡು ಹಾರಿಸಿದರೆ, ಅವರಿಗೆ ಶೆಲ್‌ಗಳಿಂದ ಉತ್ತರಿಸಲಾಗುವುದು. ಪ್ರಧಾನಿ ಮೋದಿ ಮಿಥಿಲಾದಲ್ಲಿ ರಕ್ಷಣಾ ಕಾರಿಡಾರ್ ನಿರ್ಮಿಸಲಿದ್ದಾರೆ. ಈಗ, ಪಾಕಿಸ್ತಾನಕ್ಕೆ ಅಪ್ಪಳಿಸುವ ಪ್ರತಿಯೊಂದು ಶೆಲ್ ಕೂಡ ಮಿಥಿಲಾ ಪ್ರದೇಶದಲ್ಲಿ ತಯಾರಿಸಲಾಗುವುದು ಎಂದು ಷಾ ಹೇಳಿದ್ದಾರೆ.

ಕಾಂಗ್ರೆಸ್ ಒಳನುಸುಳುಕೋರರನ್ನು ರಕ್ಷಿಸುತ್ತಿದೆ - ಅಮಿತ್ ಷಾ ಆರೋಪ

ಇದಕ್ಕೂ ಮೊದಲು ಬೆಟ್ಟಿಯಾದಲ್ಲಿ ಮಾತನಾಡಿದ ಷಾ, ಕಾಂಗ್ರೆಸ್ ಒಳನುಸುಳುವವರನ್ನು ರಕ್ಷಿಸುತ್ತಿದೆ. ದೇಶಾದ್ಯಂತದ ಎಲ್ಲಾ ಒಳನುಸುಳುವವರನ್ನು ತೆಗೆದುಹಾಕಲು ಬಿಜೆಪಿ ಬದ್ಧವಾಗಿದೆ. ಬಾಂಗ್ಲಾದೇಶಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕೇ ಅಥವಾ ಬೇಡವೇ ಎಂದು ಹೇಳಿ? ನಾಲ್ಕು ತಿಂಗಳ ಹಿಂದೆ, ರಾಹುಲ್ ಬಾಬಾ ಬಾಂಗ್ಲಾದೇಶದ ನುಸುಳುಕೋರರು ನಮ್ಮ ಮತದಾರರ ಪಟ್ಟಿಯಲ್ಲಿ ಉಳಿಯಬೇಕು ಎಂದು ಹೇಳಿದರು ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net