ನ್ಯೂಸ್

ಅಭಿಷೇಕ್​​ & ಐಶ್ವರ್ಯಾ​ ಮದುವೆಗೆ ಕಳುಹಿಸಿದ್ದ ಸ್ವೀಟ್ಸ್​ ಅಮಿತಾಭ್​​​​ ಬಚ್ಚನ್​ಗೆ ವಾಪಸ್​​ ಕೊಟ್ಟೆ; ಶತ್ರುಘ್ನ ಸಿನ್ಹಾ ​​ಹೀಗೇಳಿದ್ದೇಕೆ? | Amitabh Bachchan

ಮುಂಬೈ: ನಟ ಅಮಿತಾಬ್​​ ಬಚ್ಚನ್​​ ಪುತ್ರ ಅಭಿಷೇಕ್​​ ಮದುವೆಯ ಸಂದರ್ಭದಲ್ಲಿ ಹಿರಿಯ ಕಲಾವಿದ ಶತ್ರುಘ್ನ ಸಿನ್ಹಾ ಮನೆಗೆ ಕಳುಹಿಸಿದ್ದ ಸಿಹಿತಿಂಡಿಗಳನ್ನು ವಾಪಸ್​​ ನೀಡಿರುವುದಾಗಿ ಹಿರಿಯ ನಟ​​ ಶತ್ರುಘ್ನ ಸಿನ್ಹಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಹೌದು, ಅಮಿತಾಭ್​​​ ಬಚ್ಚನ್(Amitabh Bachchan)​​ ಜತೆಗಿನ ಬಾಂಬೆ ಟು ಗೋವಾ, ಕಲಾಪತ್ತಾರ್​, ನಸೀಬ್​, ಸಾನ್​ ಸೇರಿ ಅನೇಕ ಹಿಟ್​ ಚಿತ್ರಗಳಲ್ಲಿ ನಟಿಸಿದ ಶತ್ರುಘ್ನ ಸಿನ್ಹಾ, ಸಿಹಿ ತಿಂಡಿಗಳನ್ನು ವಾಪಸ್​​ ಅವರ ಮನೆಗೆ ಕಳುಹಿಸಿ ಎಲ್ಲರನ್ನೂ ಅಶ್ಚರ್ಯಗೊಳಿಸಿದ್ದರು.

2007ರಲ್ಲಿ ಅಭಿಷೇಕ್​​- ಐಶ್ವರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದೇ ವೇಳೆ ತಮ್ಮ ಮನೆಯ ಹಿರಿಯ ವೃದ್ಧೆ ಅಭಿಷೇಕ್​​ ಅಜ್ಜಿ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಮದುವೆ ಇಟ್ಟುಕೊಂಡ ಕಾರಣ ಯಾರನ್ನು ಕರೆಯಲು ಸಾಧ್ಯವಾಗಲಿಲ್ಲ. ನಮ್ಮ ಮತ್ತು ಐಶ್ವರ್ಯ ಕುಟುಂಬಸ್ಥರು ಮಾತ್ರ ಖಾಸಗಿಯಾಗಿ ಮದುವೆ ಸಮಾರಂಭ ಮಾಡಿದ್ದೇವು. ಅಲ್ಲದೇ, ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ನಾವು ದೊಡ್ಡ ಸಂಭ್ರಮ ಮಾಡುವುದರಿಂದ ನಮಗೆ ಒಳ್ಳೆಯದು ಆಗುವುದಿಲ್ಲ ಎಂದು ನನ್ನ ತಂದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮದುವೆ ಸಾಮಾರಂಭಕ್ಕೆ ಯಾರನ್ನು ಕರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಎಲ್ಲರ ಮನೆಗೆ ಸಿಹಿ ತಿಂಡಿಗಳ ಜತೆ ಕಾರ್ಡ್​ಗಳನ್ನು ಕಳುಹಿಸಿದ್ದೇವೆ ಎಂದು ಅಭಿಷೇಕ್​ ಬಚ್ಚನ್​​ ಇತ್ತೀಚಿಗೆ ನಡೆದ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಹೇಳಿದ್ದರು.

ಅಲ್ಲದೆ, ಹಿರಿಯ ನಟ ಶತ್ರುಘ್ನ ಸಿನ್ಹಾ ಬಗ್ಗೆ ಪ್ರಸ್ತಾಪ ಮಾಡಿದ ಅಭಿಷೇಕ್​​, ಶತ್ರುಘ್ನ ಸಿನ್ಹಾ ಅಕಂಲ್​​ ಸಿಹಿ ತಿಂಡಿಗಳನ್ನು ಮನೆಗೆ ವಾಪಸ್​​ ಕಳುಹಿಸಿದ್ದರು. ಇದೇ ಒಳ್ಳೆಯದೆ. ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಇದೀಗ ಇದೇ ವಿಷಯದ ಬಗ್ಗೆ ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿದ ನಟ ಶತ್ರುಘ್ನ ಸಿನ್ಹಾ, ನನಗೆ ಅಮಿತಾಬ್​ ಕುಟುಂಬದ ಬಗ್ಗೆ ಒಳ್ಳೆಯ ಅಭಿಮಾನ ಇದೆ. ಆದರೆ, ಮದುವೆಗೆ ಮುಂಚೆ ನನ್ನನ್ನು ಅಮಿತಾಬ್​ ಅಥವಾ ಕುಟುಂಬದವರು ಆಹ್ವಾನಿಸುತ್ತಾರೆ ಎಂದು ನಿರೀಕ್ಷೆಯಲ್ಲಿದ್ದೆ. ಆದ್ರೆ ನಂಬಿಕೆ ಹುಸಿ ಆಯ್ತು. ಮದುವೆ ಆಹ್ವಾನ ಇಲ್ಲ ಎಂದ ಮೇಲೆ ಅವರ ಸಿಹಿ ತಿಂಡಿಗಳು ನನಗೆ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)