

ಸಾಮಾನ್ಯವಾಗಿ ರೋಗಿಗಳಿಗೆ ಆಪರೇಷನ್ ಮಾಡುವ ವೈದ್ಯರನ್ನು ನಾವು ನೋಡಿದ್ದೇವೆ. ಎಲ್ಲಾದರೂ ವೈದ್ಯರೇ ತಮಗೆ ತಾವೇ ಸ್ವಂತವಾಗಿ ಅಪರೇಷನ್ ಮಾಡಿಕೊಳ್ಳುವುದನ್ನು ನೋಡಿದ್ದೀರಾ? ಹೌದು ಡಾಕ್ಟರೇ ತಮಗೆ ತಾವೇ ಸಂತಾನ ಶಸ್ತ್ರ ಹರಣ(Vasectomy) ಮಾಡಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ.
ತೈವಾನ್ ಮೂಲದ ವೈದ್ಯ ಚೆನ್-ವಿ-ನಾಂಗ್ ಎಂಬ ಪಾಸ್ಟಿಕ್ ಸರ್ಜನ್, ರಾಜಧಾನಿ ತೈಪೆ ನಗರದಲ್ಲಿ ತಮ್ಮದೆ ಆದ ಕ್ಲಿನಿಕ್ನಲ್ಲಿ ತಮಗೆ ತಾವೇ ಸಂತಾನಶಸ್ತ್ರ ಹರಣ ಮಾಡಿಕೊಂಡು, ಇದರ ಬಗ್ಗೆ ವಿಡಿಯೋ ಮಾಡಿ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಮೂರು ಮಕ್ಕಳ ತಂದೆಯಾಗಿರುವ ಚೆನ್, ತನ್ನ ಹೆಂಡತಿಗೆ ಮಕ್ಕಳ ಸಾಕು ಎಂದು ಹೇಳಿದ್ದಳು. ಹೀಗಾಗಿ, ಇತ ತನ್ನ ಪತ್ನಿಯನ್ನು ಮೆಚ್ಚಿಸುವುದಕ್ಕಾಗಿ ಈ ಚಿಕಿತ್ಸೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ಉಲ್ಲೇಖಿಸಿದ್ದಾನೆ.
ಈ ಚಿಕಿತ್ಸೆ ನಡೆಯಲು ಒಟ್ಟು 11 ಪ್ರಕ್ರಿಯಿಗಳಿದ್ದು, ಒಂದೊಂದು ಬಗ್ಗೆ ವೈದ್ಯ ಚೆನ್ ವಿಡಿಯೋದಲ್ಲಿ ವಿವರಿಸಿದ್ದಾರೆ. ಚೆನ್ ಸ್ಥಳೀಯ ಅರಿವಳಿಕೆ(Anaesthesia) ನೀಡಿಕೊಂಡು ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಆದಾಗ್ಯೂ, ಸ್ವತಃ ಶಸ್ತ್ರಚಿಕಿತ್ಸೆ ಮಾಡುವುದು ಅಷ್ಟು ಸುಲಭವಲ್ಲ, ಇಂತಹ ಕಾರ್ಯಕ್ಕೆ ಮುಂರದಾಗಿದ್ದ ಚೆನ್, ಸಾಮಾನ್ಯವಾಗಿ ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುವ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಲು ಒಂದು ಗಂಟೆ ಕಾಲವಕಾಶ ಬೇಕಾಗಿತು ಎಂದು ಹೇಳಿದ್ದಾನೆ. ಕೊನೆಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೆನ್ ಆರೋಗ್ಯದಿಂದ ಇದ್ದಾನೆ ಎಂದು ಹೇಳಲಾಗಿದೆ.
ಇದೀಗ ಈ ಶಸ್ತ್ರ ಚಿಕಿತ್ಸೆಯ ವಿಡಿಯೋ ವೈರಲ್ ಆಗಿದ್ದು, 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಚೆನ್ ಧೈರ್ಯ ಮತ್ತು ಪತ್ನಿಯ ಮೇಲಿನ ಪ್ರೀತಿಯನ್ನು ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡುವುದು ಸುರಕ್ಷಿತವಲ್ಲ, ಗಂಭೀರ ಅಪಘಾತ ಸಂಭವಿಸಬಹುದು ಎಂದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)