ಗುಳೇದಗುಡ್ಡ: ತಾಲೂಕಿನ ಕೋಟೆಕಲ್ಲ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮಹಾಲಿಂಗವ್ವ ಎಮ್ಮಿ ಹಾಗೂ ಉಪಾಧ್ಯಕ್ಷರಾಗಿ ಮೈಲಾರಲಿಂಗ ಆಲೂರು ಅವಿರೋಧ ಆಯ್ಕೆಯಾದರು.
ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹಾಲಿಂಗವ್ವ ಎಮ್ಮಿ, ಉಪಾಧ್ಯಕ್ಷ ಸ್ಥಾನಕ್ಕೆ ಮೈಲಾರಲಿಂಗ ಆಲೂರ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಮಹಾಲಿಂಗವ್ವ ಎಮ್ಮಿ ಹಾಗೂ ಉಪಾಧ್ಯಕ್ಷರಾಗಿ ಮೈಲಾರಲಿಂಗ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಪ್ರಕಟಿಸಿದರು. ಚುನಾವಣೆ ಸಂದರ್ಭ ಒಟ್ಟು 12 ಜನ ಸದಸ್ಯರಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಮಹಾಲಿಂಗವ್ವ ಎಮ್ಮಿ ಅಧ್ಯಕ್ಷರಾಗಿ, ಮೈಲಾರಲಿಂಗ ಆಲೂರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಶಶಿಧರ ದೇಸಾಯಿ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗುಳೇದಗುಡ್ಡ ಖಣ ನೀಡಿ ಸನ್ಮಾನಿಸಿದರು.
ಸಂಗಪ್ಪ ಹಡಪದ, ಬಸವರಾಜ ಚಿಲ್ಲಾಪೂರ, ಶಿವಾನಂದ ವಾಲಿಕಾರ, ಮಾಗುಂಡಪ್ಪ ಸುಂಕದ, ಸದಸ್ಯರಾದ ಕಾಶಿನಾಥ ಪುರಾಣಿಕಮಠ, ಹನುಮಂತ ಕಡ್ಲಿಮಟ್ಟಿ, ಹುಚ್ಚೇಶ ಪೂಜಾರ, ಶೋಭಾ ವಾಲಿಕಾರ, ಮಲ್ಲಕಾಜಪ್ಪ ಜಾಲಿಹಾಳ, ಶೃತಿ ಪತ್ತಾರ, ಎಂ.ಜಿ. ಭಗವತಿ, ಯಲಗುರದಪ್ಪ ತೊಗಲಂಗಿ, ವೈ.ಜಿ. ತಳವಾರ, ಕರಿಯಪ್ಪ ಸೀತಿಮನಿ, ಮೌನೇಶ ಪತ್ತಾರ, ಮಹದೇವಪ್ಪ ಕೋಟಿ, ಭೂತರಾಸ ಹಾದಿಮನಿ, ಪಂಚಾಯಿತಿ ಪಿಡಿಒ ಆರತಿ ಕ್ಷತ್ರಿ ಇತರರಿದ್ದರು.