ನ್ಯೂಸ್

ನಾವು ಡೈವೋರ್ಸ್​ ಆದ್ರೆ ನಿನ್ನ ತಂಗಿ ಜತೆ ಡೇಟಿಂಗ್​ ಹೋಗ್ಬೋದಾ?: ಪತಿಯ ಪ್ರಶ್ನೆಗೆ ಪತ್ನಿಯ ಶಾಕಿಂಗ್​ ಉತ್ತರ!

ಸಂಬಂಧ ಎಂಬುದು ಅದ್ಭುತವಾಗಿರಬಹುದು ಆದರೆ, ಕೆಲವೊಮ್ಮೆ ಅದೇ ಸಂಬಂಧ ದುಃಖದಲ್ಲಿ ಮುಳುಗಿಸಿಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ದಾಂಪತ್ಯದಲ್ಲಿನ ದ್ರೋಹ. ತುಂಬಾ ನಂಬಿ ಮದುವೆಯಾದ ವ್ಯಕ್ತಿ ಬೇರೊಬ್ಬರ ಜತೆ ಸಲುಗೆಯಿಂದ ಇದ್ದಾಗ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ.

ಹೀಗೆ ಮದುವೆಯಾದ ನವದಂಪತಿ ಕೊನೆಯವರೆಗೂ ನೆನಪಾಗಿ ಉಳಿಯಲಿ ಎಂಬ ಬಯಕೆಯಿಂದ ಐದು ವಾರಗಳ ಹನಿಮೂನ್​ಗೆಂದು ದಕ್ಷಿಣ ಅಮೆರಿಕಕ್ಕೆ ಹೊರಟಿತ್ತು. ಆದರೆ, ಆ ಹನಿಮೂನ್​ ಅವರಿಬ್ಬರ ಪಾಲಿಗೆ ಬಹಳ ದುಃಖಕರವಾಗಿತ್ತು.

ಗ್ರೇಸನ್​ ಫರ್ಗ್ಯೂಸನ್​ ಎಂಬಾತ ತನ್ನ ಕರಾಳ ಕತೆಯನ್ನು "ಮೀಡಿಯಮ್​ ಪಿಎಸ್​ ಐ ಲವ್​ ಯು" ಎಂಬ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಬರೆದುಕೊಂಡಿದ್ದು, ಮದುವೆಗೂ ಮುನ್ನ ಮತ್ತು ನಂತರ ಆತನ ಪತ್ನಿ ಹೇಗೆ ಮೋಸ ಮಾಡಿದಳು ಎಂಬುದನ್ನು ವಿವರಿಸಿದ್ದಾನೆ.

ಹನಿಮೂನ್​ಗೆ ತೆರಳುವ ಮುನ್ನವೇ ಆಕೆಗೆ ಅನೈತಿಕ ಸಂಬಂಧ ಇರುವ ಬಗ್ಗೆ ಫರ್ಗ್ಯೂಸನ್​ಗೆ ತಿಳಿಯುತ್ತದೆ. ಆದರೆ, ಸಾಕಷ್ಟು ಕನಸನ್ನಿಟ್ಟುಕೊಂಡು ಮಧುಚಂದ್ರಕ್ಕೆ ಹೊರಟ ಫರ್ಗ್ಯೂಸನ್​ಗೆ ಅದೊಂದು ಕರಾಳ ಅನುಭವವಾಗಿತ್ತಂತೆ. ಪತ್ನಿಯನ್ನು ಕರೆದುಕೊಂಡು ಹೋಗದೇ ಒಬ್ಬನೇ ಹೋಗಲು ನಿರ್ಧರಿಸಿದ್ದರಂತೆ. ಆದರೆ, ಟಿಕೆಟ್​ ರದ್ದು ಮಾಡಬಹುದೆಂಬ ಚಿಂತೆಯಿಂದ ಒಲ್ಲದ ಮನಸ್ಸಿನಿಂದ ಪತ್ನಿಯನ್ನು ಕರೆದೊಯ್ಯಬೇಕಾಯಿತು ಎನ್ನುತ್ತಾರೆ ಫರ್ಗ್ಯೂಸನ್.

ಮಧುಚಂದ್ರ ನಮ್ಮ ಸಂಬಂಧವನ್ನು ಸುಧಾರಿಸಬಹುದು ಅಂದುಕೊಂಡಿದ್ದ ಅವರಿಗೆ ಮತ್ತಷ್ಟು ಸಂಬಂಧ ಹದಗೆಟ್ಟಿತು. ಪೆರುವಿನಲ್ಲಿ ಕಳೆದ ಪ್ರತಿಯೊಂದು ಕ್ಷಣ, ಚಿಲೆಯಲ್ಲಿನ ಪ್ರತಿಯೊಂದು ಕ್ಯಾಬ್​ ರೈಡ್ ಮತ್ತು ಅರ್ಜೆಂಟೈನಾದಲ್ಲಿ ಮಾಡಿದ ಡಿನ್ನರ್ ಸೇರಿದಂತೆ ಎಲ್ಲ ಕ್ಷಣಗಳು ಶೂನ್ಯ ಎಂಬ ಭಾವನೆ ಮೂಡುವಂತೆ ಮಾಡಿದೆ.​​

ಪತ್ನಿಯ ಮೋಸದ ಬಗ್ಗೆ ತಿಳಿದು, ಅದೇ ನೋವಿನಲ್ಲಿದ್ದ ಫರ್ಗ್ಯೂಸನ್​ ಮಚುಪಿಚುಗೆ ಪ್ರವಾಸ ಮಾಡುವಾಗ ಒಂದು ಯೋಚನೆ ಬರುತ್ತದೆ. ಹೇಗಾದರೂ ಪತ್ನಿಯನ್ನು ಅಸಮಾಧಾನಗೊಳಿಸಬೇಕೆಂದು ಆಕೆಗೆ ಉದ್ದೇಶಪೂರ್ವಕವಾಗೇ ಪ್ರಶ್ನೆಯೊಂದನ್ನು ಕೇಳುತ್ತಾನೆ. ಪ್ರಶ್ನೆ ಹೀಗಿದೆ... ಒಂದು ವೇಳೆ ನಾವಿಬ್ಬರು ಡೈವೋರ್ಸ್​ ಆದರೆ, ನಾನು ನಿನ್ನ ಸಹೋದರಿಯೊಂದಿಗೆ ಡೇಟಿಂಗ್​ ಮಾಡಬಹುದೇ? ಅದು ಸಂಭವಿಸಿದಲ್ಲಿ ಅವಳು ಏನು ಮಾಡುತ್ತಿದ್ದಳು? ಎಂದು ಕೇಳುತ್ತಾನೆ.

ಇದಕ್ಕೆ ಉತ್ತರಿಸುವ ಪತ್ನಿ, ಒಂದು ವೇಳೆ ನಾವಿಬ್ಬರು ತುಂಬಾ ಸಂತೋಷವಾಗಿದ್ದರೆ, ಅವಳು ಡೇಟಿಂಗ್​ ಅನ್ನು ಮೀರುತ್ತಾಳೆಂದು ಟಾಂಗ್​ ಕೊಡುತ್ತಾಳೆ. ಪತ್ನಿಯ ಶಾಕಿಂಗ್​ ಉತ್ತರವನ್ನು ಫರ್ಗ್ಯೂಸನ್​ ನಿರೀಕ್ಷಿಸಿರಲಿಲ್ಲ. ಅಲ್ಲದೆ, ಅವನ ಪ್ರತೀಕಾರವು ಸಹ ಅವನು ಆಶಿಸಿದಷ್ಟು ಸಿಹಿಯಾಗಿರಲಿಲ್ಲ.

ಆಶ್ಚರ್ಯವೆಂದರೆ ಮಧುಚಂದ್ರದ ಶೋಚನೀಯ ದಿನಗಳ ನಂತರವೂ ಬಹು ಕಾಲದವರೆಗೆ ಅವರಿಬ್ಬರ ಸಂಬಂಧ ಉಳಿಯಲಿಲ್ಲ. ಇದೀಗ ಜೋಡಿಯು ಡೈವೋರ್ಸ್​ ಪಡೆದುಕೊಂಡಿದ್ದು, ತಮ್ಮ ಪ್ರತ್ಯೇಕ ಮಾರ್ಗಗಳಲ್ಲಿ ಸಾಗಿದ್ದಾರೆ. ಆ ಇಡೀ ಮಧುಚಂದ್ರದ ವಿಷಯವು ಸಮಯದ ಪರೀಕ್ಷೆಯಿಂದ ಉಳಿದುಕೊಂಡಿದೆ ಎಂದಿರುವ ಫರ್ಗ್ಯೂಸನ್​, ಪತ್ನಿಯ ಸಹೋದರಿಯೊಂದಿಗೆ ಡೇಟಿಂಗ್​ಗೆ ಹೋಗಲು ನನಗಿನ್ನೂ ಮನಸ್ಸಿಲ್ಲ ಎಂದಿದ್ದಾನೆ. (ಏಜೆನ್ಸೀಸ್​)