ನ್ಯೂಸ್

ಅದೊಂದು ವಿಷಯದಲ್ಲಿ ನಾನು ನತದೃಷ್ಟೆ! ಯೋಚಿಸಲು ನನ್ನಿಂದ ಕಷ್ಟ, ಭಯ: ಬೋಲ್ಡ್​ ಬ್ಯೂಟಿ ಪೂನಂ ಓಪನ್​ ಟಾಕ್​ | Poonam Pandey

Poonam Pandey: ಬಾಲಿವುಡ್​ ಅಂಗಳದಲ್ಲಿ ಆಗಾಗ್ಗೆ ತನ್ನ ಬೋಲ್ಡ್ ಅವತಾರ, ಬಿಚ್ಚುಮಾತುಗಳಿಂದಲೇ ಭಾರೀ ಸದ್ದು, ವಿವಾದಕ್ಕೆ ಸೌಂಡ್​ ಮಾಡುವ ಹಾಟ್​ ಬ್ಯೂಟಿ, ನಟಿ​ ಪೂನಂ ಪಾಂಡೆ, ಇದೀಗ ಮತ್ತೊಮ್ಮೆ ನೆಟ್ಟಿಗರ ಕುತೂಹಲ ಚರ್ಚೆಗೆ ಗ್ರಾಸವಾಗಿದ್ದಾರೆ. ಅದು ಎರಡನೇ ಮದುವೆ ಕುರಿತಂತೆ.

"ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದ ನಂತರ ಜೀವನ ಚೆನ್ನಾಗಿ ಸಾಗುತ್ತಿದೆ. ಈಗಿರುವ ಪರಿಸ್ಥಿತಿ ನೆನಪಿಸಿಕೊಂಡಾಗ ಹಿಂದಿನ ಕ್ಷಣಗಳ ನೆನಪು ಬೇಡ ಎನ್ನಿಸುತ್ತದೆ. ಮುಂದೆ ಮತ್ತೆ ಯಾರನ್ನೂ ನಂಬಲು ನನಗಿಷ್ಟವಿಲ್ಲ. ಅದೇನೋ ಭಯವಿದೆ. ಕಳೆದ ಎರಡು ವರ್ಷಗಳಿಂದ ಒಂಟಿಯಾಗಿ ಬದುಕುತ್ತಿದ್ದೇನೆ. ಈಗ ನನ್ನಲ್ಲಿ ಖುಷಿ ತುಂಬಿದೆ. ದಾಂಪತ್ಯ ಜೀವನ ನನಗೆ ಹೇಳಿ ಮಾಡಿಸಿದ್ದಲ್ಲ ಎಂಬ ವಿಷಯ ನನಗೆ ಬಹಳ ಚೆನ್ನಾಗಿ ಅರ್ಥವಾಗಿದೆ" ಎಂದಿದ್ದಾರೆ.

"ಒಂದೊಳ್ಳೆ ಕುಟುಂಬ ಮತ್ತು ಕರಿಯರ್​ ನನ್ನ ಮುಂದಿದೆ. ಈ ಎರಡು ನನಗೆ ತೃಪ್ತಿಯನ್ನು ನೀಡಿವೆ. ಎರಡನೇ ಮದುವೆ ಎಂಬ ವಿಷಯ ಕೇಳಿದೊಡನೆ ನನ್ನಲ್ಲಿ ಭಯ ಆವರಿಸುತ್ತದೆ. ಮತ್ತು ನನಗೆ ಮದುವೆಯಾಗುವ ಆಸೆಯಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ನನಗೆ ಯಾರನ್ನೂ ನಂಬಲು ಮನಸ್ಸಿಲ್ಲ" ಎಂದು ನೇರವಾಗಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

2020ರಲ್ಲಿ ಸ್ಯಾಮ್​ ಜತೆಗೆ ವಿವಾಹ

2020ರಲ್ಲಿ ತನ್ನ ಗೆಳೆಯ ಸ್ಯಾಮ್ ಬಾಂಬೆ ಎಂಬ ವ್ಯಕ್ತಿಯನ್ನು ಮದುವೆಯಾದ ಪೂನಂ, ಆತನೊಂದಿಗೆ ಗೋವಾಕ್ಕೆ ಹನಿಮೂನ್‌ಗೆ ತೆರಳಿದ್ದಳು. ಈ ಮಧ್ಯದಲ್ಲಿ ತನಗೆ ಪತಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ ಪೂನಂ ಪಾಂಡೆ, ಪತಿಯಿಂದ ದೂರವಾಗಲು ನಿರ್ಧರಿಸಿದ್ದಳು. ಆಕೆಯ ದೂರಿನ ಅನ್ವಯ ಪೊಲೀಸರು ಸ್ಯಾಮ್​ನನ್ನು ಬಂಧಿಸಿದರು. ಈ ವೇಳೆ ನಟಿಯ ಕಣ್ಣು ಮತ್ತು ಮುಖಕ್ಕೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.

ಸಾವನ್ನೇ ಸುಳ್ಳು ಮಾಡಿದ ಪೂನಂ

ಕಳೆದ ವರ್ಷ, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತನ್ನ ಸಾವನ್ನೇ ಫೇಕ್​ ಮಾಡಿದ ಪೂನಂ, ಈ ಸುದ್ದಿ ವೈರಲ್ ಆಗಿ ವ್ಯಾಪಕ ಸಂದೇಶಗಳು ವ್ಯಕ್ತವಾಗುತ್ತಿದ್ದಂತೆ ನಾನು ಇನ್ನೂ ಜೀವಂತವಾಗಿದ್ದೇನೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನನ್ನ ಸಾವನ್ನು ನಕಲು ಮಾಡಬೇಕಾಯಿತು ಎಂದು ಹೇಳಿಕೊಂಡಳು. ನಟಿಯ ಸುಳ್ಳು ಹೇಳಿಕೆಗೆ ಕಳೆದ ವರ್ಷ ಭಾರೀ ಟೀಕೆ, ಆಕ್ರೋಶ ವ್ಯಕ್ತವಾಗಿತ್ತು. ಇನ್ನು 2011ರಲ್ಲಿ, ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದರೆ, ಮೈದಾನದಲ್ಲಿ ಬೆತ್ತಲೆಯಾಗಿ ಓಡಾಡುವುದಾಗಿ ಪೂನಂ ಬಹಿರಂಗ ಹೇಳಿಕೆ ನೀಡಿದ್ದಳು. ಇಂತಹ ಹಸಿಬಿಸಿ ಹೇಳಿಕೆಗಳು ಮತ್ತು ತನ್ನ ಬೋಲ್ಡ್​ ಲುಕ್​ಗಳಿಂದಲೇ ಸುದ್ದಿಯಾಗುವ ಪೂನಂ, ಒಂದಲ್ಲ ಒಂದು ವಿಚಾರಗಳಿಂದ ಜಾಲತಾಣಗಳಲ್ಲಿ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾಳೆ,(ಏಜೆನ್ಸೀಸ್).