IND vs NZ: ರೋಹಿತ್​, ಕೊಹ್ಲಿ, ಗಿಲ್​... ಆರಂಭದಲ್ಲೇ ಟೀಮ್​ ಇಂಡಿಯಾಗೆ ಆಘಾತ

ವಿಜಯವಾಣಿ - 2025-03-02T152508.794
Published on

IND vs NZ: ಇಂದು (ಮಾ.02) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಮೂರನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕಿವೀಸ್​ ಪಡೆ, ಟೀಮ್ ಇಂಡಿಯಾಗೆ ಬ್ಯಾಟ್ ಮಾಡವಂತೆ ಆಹ್ವಾನಿಸಿದೆ. ಆದರೆ, ಆರಂಭಿಕ ಹಂತದಲ್ಲೇ ಭಾರತ ತಂಡಕ್ಕೆ ಭಾರೀ ಆಘಾತ ಎದುರಾಗಿದೆ.

ನ್ಯೂಜಿಲೆಂಡ್​ ಬೌಲರ್​ಗಳ ಎದುರು ಅಬ್ಬರಿಸಲು ಓಪನಿಂಗ್ ಬಂದ ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ಶುಭಮನ್​ ಗಿಲ್​, ಮೊದಲ ಮೂವರು ಓವರ್ ಅಂತ್ಯದೊಳಗೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್​ನತ್ತ ಮುಖಮಾಡಿದರು. ಅವರ ಬೆನ್ನಲ್ಲೇ ವಿರಾಟ್​ ಕೊಹ್ಲಿ ಕೂಡ ಔಟ್ ಆದರು. ಇದು ಟೀಮ್ ಇಂಡಿಯಾ ಅಭಿಮಾನಿಗಳನ್ನು ಅಕ್ಷರಶಃ ಅಚ್ಚರಿಗೆ ದೂಡಿದ್ದು, ಉತ್ತಮ ಆರಂಭ ಪಡೆಯಲು ತಂಡ ವಿಫಲವಾಯಿತು ಎಂಬ ಬೇಸರವನ್ನು ಪಂದ್ಯದ ಕೊನೆಯವರೆಗೂ ಹೊರುವಂತೆ ಮಾಡಿದೆ.

ಮೂವರ ರನ್​ ಕೊಡುಗೆ?

ರೋಹಿತ್ ಶರ್ಮ ( 17 ಎಸೆತ, 15 ರನ್​)

ಶುಭಮನ್​ ಗಿಲ್​ (7 ಎಸೆತ, 2 ರನ್​)

ವಿರಾಟ್​ ಕೊಹ್ಲಿ (14 ಎಸೆತ, 11 ರನ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net