ನ್ಯೂಸ್

ಪತಿಯ ಮರ್ಮಾಂಗಕ್ಕೆ ಜಾಡಿಸಿ ಒದ್ದ ಪತ್ನಿ: ಮದ್ವೆ ಸಮಾರಂಭದ ನಡುವೆಯೇ ಬಿತ್ತು ಹೆಣ!

ಭೋಪಾಲ್​: ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಆರೋಪ ಪತ್ನಿಯ ವಿರುದ್ಧ ಕೇಳಿಬಂದಿದ್ದು, ಈ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಘುಗ್ರಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಮದುವೆ ಸಮಾರಂಭದಲ್ಲಿನ ಡ್ಯಾನ್ಸ್ ವಿಚಾರವಾಗಿ ದಂಪತಿ ನಡುವೆ ಉಂಟಾದ ಜಗಳವು ಪತಿಯ ದಾರುಣ ಸಾವಿನಲ್ಲಿ ಅಂತ್ಯವಾಗಿದೆ. ಮದುವೆ ಸಮಾರಂಭದ ಬೆನ್ನಲ್ಲೇ ದುರಂತ ಸಾವು ಸಂಭವಿಸಿದೆ.

ಘಟನೆಯ ವಿವರಣೆಗೆ ಬರುವುದಾದರೆ, ಬುಧವಾರ ಘುಗ್ರಿ ಗ್ರಾಮದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಡ್ಯಾನ್ಸ್ ಮಾಡುವಾಗ ಅದೇ ಗ್ರಾಮದ ನಿವಾಸಿಗಳಾದ ಭಗತ್​ ಸಿಂಗ್​ ಧ್ರುವೆ ಮತ್ತು ಆತನ ಪತ್ನಿ ಆವಂತಿ ನಡುವೆ ಜಗಳ ಶುರುವಾಗಿದೆ. ಯಾವ ವಿಚಾರಕ್ಕೆ ಜಗಳ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಮನೆಗೆ ಹೋಗುವ ಮಾರ್ಗ ಮಧ್ಯೆಯು ದಂಪತಿ ಜಗಳ ಆಡಿದ್ದಾರೆ.

ಈ ವೇಳೆ ಕೋಪದ ನಿಯಂತ್ರಣ ಕಳೆದುಕೊಂಡ ಆವಂತಿ ಗಂಡನ ಮರ್ಮಾಂಗಕ್ಕೆ ಒದ್ದಿದ್ದಾಳೆ. ತಕ್ಷಣ ನೋವಿನಿಂದ ಭಗತ್​ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆತ ಬದುಕುಳಿಯಲೇ ಇಲ್ಲ. ಈ ಸಂಬಂಧ ಭಗತ್​ ಅತ್ತಿಗೆ ಆವಂತಿ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದು ಉದ್ದೇಶಪೂರ್ವಕವೋ? ಅಥವಾ ಅಚಾತುರ್ಯವೋ? ಎಂಬುದು ತನಿಖೆಯ ನಂತರವೇ ತಿಳಿದುಬರಲಿದೆ. ಸದ್ಯ ಭಗತ್​ ಮೃತದೇಹಕ್ಕೆ ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನೆರವೇರಿದೆ. (ಏಜೆನ್ಸೀಸ್​)