ನ್ಯೂಸ್

ಪತ್ನಿಯ ಶಿರಚ್ಛೇದನ ಮಾಡಿ ತುಂಡಾದ ತಲೆಯೊಂದಿಗೆ ಪೊಲೀಸ್​ ಠಾಣೆಗೆ ಬಂದ ಪತಿ; ಕಾರಣ ಕೇಳಿದ್ರೆ ಶಾಕ್​! | Police Station

Police Station : ಹೆಣ್ಣುಮಕ್ಕಳ ಮುಂದೆ ನಡೆದ ಜಗಳದಲ್ಲಿ ಪತ್ನಿಯ ಶಿರಚ್ಛೇದನ ಮಾಡಿದ ಪತಿ, ಕತ್ತರಿಸಿದ ಆಕೆಯ ತಲೆಯೊಂದಿಗೆ(ಕುತ್ತಿಗೆ)ಯನ್ನು ಹಿಡಿದುಕೊಂಡು ಪೊಲೀಸ್​​ ಠಾಣೆ ಬಂದು ಶರಣಾದ ಘಟನೆ ಅಸ್ಸಾಂನ ಚಿರಾಂಗ್​ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಆರೋಪಿ ಸಂಜೆ ಬ್ರಿಟೇಶ್ ಹಜೋಂಗ್ ಎಂದು ಗುರುತಿಸಲಾಗಿದ್ದು, ಆರೋಪಿ ತನ್ನ ಪತ್ನಿ ಬೈಜಯಂತಿ ಹಜೋಂಗ್ (50) ಅವರನ್ನು ಕೊಂದಿದ್ದಾನೆ. "ಆತನನ್ನು ಬಂಧಿಸಲಾಗಿದ್ದು, ನಾವು ಆತನನ್ನು ವಿಚಾರಣೆ ನಡೆಸುತ್ತಿದ್ದೇವೆ. ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ" ಎಂದು ಚಿರಾಂಗ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಕ್ಷತ್ ಗರ್ಗ್ ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. "ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಲಾಗುವುದು" ಎಂದು ತನಿಖಾ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ಕುಟುಂಬಸ್ಥರ ಪ್ರಕಾರ, ಆರೋಪಿ ಬ್ರಿಟೇಶ್ ಕೋಪಿಷ್ಟಿಯಾಗಿದ್ದಾನೆ. ಅತ ಯಾವಾಗಲೂ ವಿಪರೀತ ಕೋಪ ಹೊಂದಿದ್ದಾನೆ. ಪ್ರತಿದಿನ ಗಂಡ ಹೆಂಡತಿ ಮಧ್ಯ ಯಾವಾದದರೂ ಒಂದು ಸಮಸ್ಯೆಗೆ ಜಗಳವಾಡುತ್ತಿರುತ್ತಾರೆ. ಆ ದಿನವೂ ಅವರು ಯಾವುದೋ ವಿಷಯಕ್ಕೆ ಜಗಳವಾಡುತ್ತಿದ್ದರು, ಆಗ ಅವನು ಇದ್ದಕ್ಕಿದ್ದಂತೆ ಮಚ್ಚನ್ನು ತೆಗೆದುಕೊಂಡು ಬಾಯಿ ಜಯಂತಿಯ ಶಿರಚ್ಛೇದ ಮಾಡಿ ಮನೆಯಿಂದ ಹೊರಟುಹೋದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.(ಏಜೆನ್ಸೀಸ್​)