ನ್ಯೂಸ್

ಊರುಗೋಲಿನ ಸಹಾಯದಲ್ಲಿ ಹೃತಿಕ್ ರೋಷನ್​; ಅಷ್ಟಕ್ಕೂ ಆಗಿದ್ದಾದರು ಏನು?

ಮುಂಬೈ: ಫೈಟರ್​ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ನಟ ಹೃತಿಕ್​​ ರೋಷನ್​ ಸ್ನಾಯು ಸೆಳೆತದಿಂದ ಬಳಲುತ್ತಿರುವುದಾಗಿ ತಿಳಿಸಿದ್ದು, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುರುಷರು ಅನಾರೋಗ್ಯದಿಂದ ಬಳಲುತ್ತಿರುವಾಗ ಅದನ್ನು ವ್ಯಕ್ತಪಡಿಸಬಾರದು ಎಂದು ಸಮಾಜದಲ್ಲಿ ಹಬ್ಬಿರುವ ನಂಬಿಕೆಯ ಕುರಿತು ತಮ್ಮ ಯೋಚನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಊರುಗೋಲುಗಳ ಸಹಾಯದೊಂದಿಗೆ ಕನ್ನಡಿ ಮುಂದಿರುವ ಫೋಟೋವನ್ನು ಹಂಚಿಕೊಂಡಿರುವ ನಟ ನಿಜವಾದ ಶಕ್ತಿ ಎಂದರೇನು ಇದು ನಿಮಗೆ ಹೇಗೆ ಅನಿಸುತ್ತಿದೆ ಎಂದು ಪ್ರಶ್ನಿಸಿದ್ಧಾರೆ.

ನಿಮ್ಮಲ್ಲಿ ಎಷ್ಟು ಮಂದಿ ಊರುಗೋಲು ಹಾಗೂ ಗಾಲಿಕುರ್ಚಿಯನ್ನು ಬಳಸಿದ್ದೀರಾ. ಅದು ನಿಮಗೆ ಹೇಗೆ ಅನಿಸಿತ್ತು. ನನ್ನ ತಾತ ವಿಮಾನ ನಿಲ್ದಾಣದಲ್ಲಿ ಗಾಲಿಕುರ್ಚಿಯ ಮೇಲೆ ಕುಳಿತುಕೊಳ್ಳಲು ನಿರಾಕರಿಸಿದ್ದು ನನಗೆ ನೆನಪಿದೆ. ಏಕೆಂದರೆ ಅದು ಅವರಿಗೆ ತಾನು ಬಲಶಾಲಿಯಲ್ಲ ಎಂದು ತೋರಿಸಿಕೊಡುತ್ತಿತ್ತು. ಎಲ್ಲರೆದುರು ತಾನು ಸ್ಟ್ರಾಂಗ್ ಎಂದು ತೋರಿಸಬೇಕಿತ್ತು. ಆಗ ನಾನು ಆದರೆ ದಾದಾ, ಇದು ಕೇವಲ ಒಂದು ಗಾಯ ಮತ್ತು ನಿಮ್ಮ ವಯಸ್ಸಿಗೂ ಈ ವ್ಹೀಲ್‌ಚೇರ್‌ಗೂ ಸಂಬಂಧವಿಲ್ಲ ಇದು ನಿಮ್ಮ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದಿದ್ದೆ.

ಗಾಯಕ್ಕಾಗಿ ಗಾಲಿಕುರ್ಚಿ ಬಳಸಿದರೆ ವಯಸ್ಸಿನ ಅಂಶವು ಅನ್ವಯಿಸುವುದಿಲ್ಲ ಎಂದು ನಾನು ವಾದಿಸಿದೆ. ಅವರು ನಿರಾಕರಿಸಿದರು ಮತ್ತು ಅಪರಿಚಿತರಿಗೆ ತಾನು ಬಲವಾಗಿದ್ದೇನೆಂದು ತೋರ್ಪಡಿಸಿಕೊಂಡರು. ಇದು ಅವರ ನೋವನ್ನು ಇನ್ನಷ್ಟು ಹದಗೆಡಿಸಿತು ಮತ್ತು ಗುಣಪಡಿಸುವಿಕೆಯನ್ನು ವಿಳಂಬಗೊಳಿಸಿತು.

ಸೈನಿಕರಿಗೆ ಅವರು ವೈದ್ಯಕೀಯವಾಗಿ ತೊಂದರೆಗೊಳಗಾದಾಗಲೂ ಊರುಗೋಲು ಅಗತ್ಯವಿಲ್ಲ ಎಂದು ನೀವು ಹೇಳಿದರೆ ಅದನ್ನು ನಾನು ನಿರಾಕರಿಸುತ್ತೇನೆ. ಊರುಗೋಲು, ಗಾಲಿಕುರ್ಚಿ ಇದಾವುದೂ ಅಸಾಮರ್ಥ್ಯ ಅಥವಾ ದುರ್ಬಲತೆ ಅಲ್ಲ. ಇದನ್ನು ಬಳಸುವುದರಿಂದ ನಮ್ಮ ಸ್ಟ್ರಾಂಗ್ ಚಿತ್ರಣಕ್ಕೆ ಕುಂದು ಬರುವುದಿಲ್ಲ ಎಂದು ನಾನು ನಂಬುತ್ತೇನೆ ಎಂದು ಬರೆದುಕೊಂಡಿದ್ಧಾರೆ.