Japan| ಯಾವುದೇ ವಾಹನಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಬೇಕಾದರೆ ಇಂಧನ ಬಹಳ ಮುಖ್ಯ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ಇಂಧನದ ಬೆಲೆ ದುಬಾರಿಯಾಗಿ, ಜನರು ನಿತ್ಯ ಬೇಸರದಲ್ಲೇ ಪ್ರಯಾಣ ಮಾಡುವ ಪರಿಸ್ಥಿತಿ ಬಂದೊದಗಿದೆ. ಇಂಧನ ಇಲ್ಲದೇ ಯಾವುದೇ ವಾಹನ ಸ್ವಲ್ಪವೂ ಮುಂದೆ ಹೋಗಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬಳಸದೆ ಕೇವಲ ಹಸುವಿನ ಸಗಣಿಯಿಂದ ವಾಹನಗಳನ್ನು ಓಡಿಸಲಾಗುತ್ತಿದೆ. ಇನ್ನೂ ಈ ದೇಶದ ವಿಭಿನ್ನ ಟೆಕ್ನಾಲಜಿಗೆ ಇಡೀ ಜಗತ್ತು ಆಶ್ಚರ್ಯಗೊಂಡಿದೆ.
ಇದನ್ನೂ ಓದಿ: ರಾಮ ನವಮಿಗೂ ಮುನ್ನ ಅಯೋಧ್ಯೆಯಲ್ಲಿ ಪೊಲೀಸರ ಕಟ್ಟೆಚ್ಚರ! ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ ; Ayodhya
ಇಂಧನ ಇಲ್ಲದೇ ಯಾವುದೇ ವಾಹನ ಸ್ವಲ್ಪವೂ ಮುಂದೆ ಹೋಗೋದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಯಾವುದೇ ವಾಹನ ಚಲಿಸಬೇಕಾದರೆ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಬೇಕೇ ಬೇಕು. ಇಂಧನ ಕೈಗಾರಿಕಾ ಅಭಿವೃದ್ಧಿಗೆ ಅವಶ್ಯಕವಾಗಿದೆ. ಇಂಧನವನ್ನು ವಿವಿಧ ಮೂಲಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದ್ರೆ ಈ ದೇಶದಲ್ಲಿ ಹಸುವಿನ ಸಗಣಿಯಿಂದ ಇಂಧನ ಪೂರೈಕೆ ಮಾಡಿ ಅವುಗಳನ್ನು ವಾಹನಗಳಿಗೆ ಹಾಕಲಾಗುತ್ತಿದೆ.
ಟೆಕ್ನಾಲಜಿ ಎಂಬ ವಿಷಯಕ್ಕೆ ಬಂದಾಗ ಜಪಾನ್ ಎದುರು ಬೇರೆ ಯಾರು ನಿಲ್ಲಲು ಸಾಧ್ಯವಿಲ್ಲ. ಜಪಾನ್ ತನ್ನ ತಂತ್ರಜ್ಞಾನ, ಸಂಶೋಧನೆ, ಮತ್ತು ಆವಿಷ್ಕಾರಗಳ ಮೂಲಕ ಹೆಚ್ಚು ಪ್ರಸಿದ್ಧವಾಗಿದೆ. ನಾವೀನ್ಯತೆ ಎಂಬಲ್ಲಿ ಜಪಾನ್ ಅನೇಕ ಕ್ಷೇತ್ರಗಳಲ್ಲಿ ಮೊದಲಿನಲ್ಲಿದ್ದು, ಅಲ್ಲಿನ ವಿಜ್ಞಾನಿಗಳು ಅನೇಕ ವಿಷಯಗಳನ್ನು ವಿಭಿನ್ನವಾಗಿ ಕಂಡು ಹಿಡಿದಿದ್ದಾರೆ. ಇದೀಗ ಹಸುವಿನ ಸಗಣಿಯಿಂದ ಪರಿಸರ ಸ್ನೇಹಿ ಇಂಧನ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಹಸುವಿನ ಸಗಣಿಯಿಂದ ಹೈಡ್ರೋಜನ್ ತಯಾರಿಸಿ ಅದರಿಂದ ವಾಹನಗಳನ್ನು ಓಡಿಸುತ್ತಿದ್ದಾರೆ.
ಹಸುವಿನ ಸಗಣಿ ಮತ್ತು ಮೂತ್ರವನ್ನು ಆಮ್ಲಜನಕರಹಿತ ಯಂತ್ರಕ್ಕೆ ಹಾಕಲಾಗುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾಗಳು ತ್ಯಾಜ್ಯವನ್ನು ಕೊಳೆಯಿಸಿ, ಜೈವಿಕ ಅನಿಲವನ್ನು ಉತ್ಪಾದಿಸುತ್ತವೆ. ಈ ಜೈವಿಕ ಅನಿಲವನ್ನು ಹೆಚ್ಚಿನ ತಾಪಮಾನದ ಪ್ರಕ್ರಿಯೆಯ ಮೂಲಕ ಹೈಡ್ರೋಜನ್ ಆಗಿ ಪರಿವರ್ತಿಸಲಾಗುತ್ತದೆ. ಈ ಹೈಡ್ರೋಜನ್ ಕೃಷಿ ಉಪಕರಣಗಳು ಮತ್ತು ವಾಹನಗಳ ಇಂಧನವಾಗಿ ಬದಲಾಗುತ್ತದೆ.
ಜಪಾನ್ ಈಗಾಗಲೇ ಎಲೆಕ್ಟ್ರಾನಿಕ್ಸ್ ಮತ್ತು ರೋಬೋಟಿಕ್ಸ್ನಲ್ಲಿ ವಿಶ್ವದ ಗಮನಸೆಳೆದಿದೆ. 5G, ಕಂಪ್ಯೂಟಿಂಗ್, ಮತ್ತು AI (ಕೃತಕ ಬುದ್ಧಿಮತ್ತೆ) ಕ್ಷೇತ್ರದಲ್ಲೂ ಪ್ರಮುಖ ಸಾಧನೆ ಮಾಡಿದೆ. ಇದೀಗ ಹವಾಮಾನ ಬದಲಾವಣೆ ಮತ್ತು ಇಂಗಾಲದ ಹೊರಸೂಸುವಿಕೆಯ ಬಗ್ಗೆ ಕಳವಳಗಳು ಹೆಚ್ಚುತ್ತಿರುವಾಗ, ಜಪಾನ್ ಒಂದು ವಿಭಿನ್ನ ಪರಿಹಾರವನ್ನು ಕಂಡುಕೊಂಡಿದೆ.
ಜಪಾನ್ನಲ್ಲಿ ಹಸುವಿನ ಸಗಣಿಯಿಂದ ಹೈಡ್ರೋಜನ್ ಇಂಧನವನ್ನು ತಯಾರಿಸಲಾಗುತ್ತಿದೆ. ಜಪಾನ್‌ನ ಶಿಕಾವೊಯ್ ನಗರದಲ್ಲಿ, ಟ್ರಾಕ್ಟರ್‌ಗಳು, ಫೋರ್ಕ್‌ಲಿಫ್ಟ್‌ಗಳು ಮತ್ತು ಇತರ ವ್ಯವಹಾರಗಳಿಗೆ ವಿದ್ಯುತ್ ಒದಗಿಸಲು ಹೈಡ್ರೋಜನ್ ಇಂಧನವನ್ನು ಉತ್ಪಾದಿಸಲು ಹಸುವಿನ ಸಗಣಿ ಬಳಸಲಾಗುತ್ತಿದೆ. ಇಲ್ಲಿನ ಡೈರಿ ಉದ್ಯಮವು ಪ್ರತಿ ವರ್ಷ 20 ಮಿಲಿಯನ್ ಟನ್ ಸಗಣಿ ಉತ್ಪಾದಿಸುತ್ತದೆ. ಅದನ್ನು ಈಗ ಹಸಿರು ಶಕ್ತಿಯ ಮೂಲವನ್ನಾಗಿ ಬಳಕೆ ಮಾಡಲಾಗ್ತಿದೆ.
(ಏಜೆನ್ಸೀಸ್)