ನ್ಯೂಸ್

ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ; ಇಂದು ಮನೆಯಿಂದ ಹೊರಬರುವ ಸ್ಫರ್ಧಿಗಳು ಯಾರು ಯಾರು ಗೊತ್ತ?

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಅಂತಿಮ ಹಂತ ತಲುಪಿದ್ದು, ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಬಿಗ್​ಬಾಸ್​ ಆವೃತ್ತಿ ಜನರ ಗಮನವನ್ನು ಹೆಚ್ಚು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರತಿಬಾರಿ ಫಿನಾಲೆಯಲ್ಲಿ ಐದು ಮಂದಿ ಸ್ಫರ್ರ್ಧಿಗಳು ಇರುತ್ತಿದ್ದರು, ಆದರೆ ಈ ಬಾರಿ ಜನರ ಲೆಕ್ಕಾಚಾರವನ್ನು ವಾಹಿನಿಯವರು ಫಿನಾಲೆಯಲ್ಲಿ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಕಳೆದ 10 ಆವೃತ್ತಿಗಳಲ್ಲಿ ಈ ರೀತಿ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗಿದ್ದು, ಶನಿವಾರವೂ ಸಹ ಎಲಿಮಿನೇಷನ್​ ನಡೆಯಲಿದೆ ಎಂದು ಹೇಳಲಾಗಿದೆ.

ಸುದ್ದಿ ಮೂಲಗಳ ಪ್ರಕಾರ ಇಂದು ಮೂರರಿಂದ ಅಥವಾ ನಾಲ್ಕು ಮಂದಿಯನ್ನು ಮನೆಯಿಂದ ಹೊರಕ್ಕೆ ಕಳುಹಿಸಿ, ಕೊನೆಯಲ್ಲಿ ಇಬ್ಬರನ್ನು ಫಿನಾಲೆಗೆ ಕಳುಹಿಸಬಹುದು ಎಂದು ಹೇಳಲಾಗಿದೆ. ಮೂವರನ್ನು ಇಂದು ಹೊರಕ್ಕೆ ಕಳುಹಿಸಿ, ಉಳಿದ ಮೂವರನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ವೋಟಿಂಗ್​ ಆಧಾರದ ಮೇಲೆ ಮನೆಯಿಂದ ಮೊದಲಿಗೆ ತುಕಾಲಿ ಸಂತೋಷ್ ಹೊರಬರಬಹುದು ಎಂದು ಹೇಳಲಾಗಿದೆ. ಆದರೆ, ಡ್ರೋನ್​ ಪ್ರತಾಪ್​ ಅವರ ಹೆಸರು ಸಹ ಕೇಳಿ ಬರುತ್ತಿದ್ದು, ಅಂತಿಮವಾಗಿ ಸಂಜೆ ಸಂಚಿಕೆ ಪ್ರಸಾರವಾದ ನಂತರ ಕುತೂಹಲಕ್ಕೆ ತೆರೆ ಬೀಳಲಿದೆ.

ಜನವರಿ 28ರಂದು ಬಿಗ್​ಬಾಸ್​ ಕಪ್​ ಯಾರ ಪಾಲಾಗಲಿದ ಎಂಬುದರ ಬಗ್ಗೆ ತೆರೆ ಬೀಳಲಿದೆ. ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಮಧ್ಯೆ ಕಪ್​ಗಾಗಿ ಫೈಟ್​ ನಡೆಯುತ್ತಿದೆ. ಈ ಬಾರಿ ಕಪ್ ಗೆದ್ದು 50 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುವವರು ಯಾರು ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.