ನ್ಯೂಸ್

'ಪಿತೃ ದೋಷ' ಎಷ್ಟು ತಲೆಮಾರುಗಳವರೆಗೆ ಇರುತ್ತದೆ; ಈ ದೋಷದಿಂದ ಪಾರಾಗಲು ಏನು ಮಾಡಬೇಕು| PitruPaksha

PitruPaksha ; ಪಿತೃ ದೋಷವು ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿರದ ದೋಷವಾಗಿದೆ. ಇದು ಪೀಳಿಗೆಯಿಂದ ಪೀಳಿಗೆಗೆ ಅನುಸರಿಸುವ ದೋಷವಾಗಿದೆ. ಕೆಲ ನಂಬಿಕೆಗಳ ಪ್ರಕಾರ, ಪಿತೃ ದೋಷವು ಏಳು ತಲೆಮಾರುಗಳವರೆಗೆ ಇರುತ್ತದೆ ಎಂದು ನಂಬಲಾಗುತ್ತದೆ.

ಆದರೆ ಈ ಪಿತೃ ದೋಷ ಶಮನಗೊಳ್ಳುವವರೆಗೆ ಇಡೀ ಕುಟುಂಬಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಅಂದಹಾಗೆ, ಕುಟುಂಬದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಪಿತೃ ದೋಷದಿಂದ ಬಳಲುವುದಿಲ್ಲ. ಇದು ವ್ಯಕ್ತಿಯ ಸ್ವಂತ ಕರ್ಮದ ಫಲಿತಾಂಶವನ್ನು ಸಹ ಒಳಗೊಂಡಿದೆ. ಹಾಗಾಗಿ ಒಂದೇ ಕುಟುಂಬದಲ್ಲಿ ಎರಡು ಮಕ್ಕಳು ಅಥವಾ ಹೆಚ್ಚಿನ ಮಕ್ಕಳಿದ್ದರೆ, ಯಾರಾದರೂ ಅದರ ಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ಇನ್ನೂ ಈ ಪಿತೃ ದೋಷ ಎಷ್ಟು ಕಾಲ ಇರುತ್ತದೆ ಮತ್ತು ಇದರಿಂದ ಪಾರಾಗಲು ಯಾವ ಪರಿಹಾರ ಅನುಸರಿಸಬೇಕು ಎಂಬುದನ್ನು ತಿಳಿಯೋಣ.

ಪಿತೃ ದೋಷ ಹೇಗೆ ಬರುತ್ತದೆ?

ಗರುಡ ಪುರಾಣದ ಪ್ರಕಾರ, ಕುಟುಂಬದ ಮುಖ್ಯಸ್ಥರು ಯಾವುದೇ ಪ್ರಾಣಿ, ಹಾವು ಅಥವಾ ಅಸಹಾಯಕ ವ್ಯಕ್ತಿಯನ್ನು ಕೊಂದರೆ ಅಥವಾ ಹಿಂಸಿಸಿದರೆ, ಆ ವ್ಯಕ್ತಿ ಪಿತೃ ದೋಷದಿಂದ ಬಳಲುತ್ತಾರೆ ಎಂದು ನಂಬಲಾಗಿದೆ. ಜ್ಯೋತಿಷ್ಯದ ಪ್ರಕಾರ, ಯಾರೊಬ್ಬರ ಜಾತಕದ ಎರಡನೇ, ಎಂಟನೇ ಮತ್ತು ಹತ್ತನೇ ಮನೆಗಳಲ್ಲಿ ಸೂರ್ಯನ ಜೊತೆಗೆ ಕೇತು ಅಥವಾ ರಾಹು ಇದ್ದರೆ, ಪಿತೃ ದೋಷ ಉಂಟಾಗುತ್ತದೆ ಎನ್ನಲಾಗಿದೆ.

ಪಿತ್ರ ದೋಷದ ಲಕ್ಷಣ

ಕುಟುಂಬದಲ್ಲಿ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಲೇ ಇರುತ್ತದೆ. ಜೊತೆಗೆ ಕುಟುಂಬದಲ್ಲಿನ ಮಕ್ಕಳಿಗೆ ಯಶಸ್ಸು ಸಿಗುವುದಿಲ್ಲ.

ಪಿತೃ ದೋಷ ಇರುವ ವ್ಯಕ್ತಿಯು ಯಾವಾಗಲೂ ಕೋಪ, ಹತಾಶೆ ಮತ್ತು ಖಿನ್ನತೆಯಿಂದ ಸುತ್ತುವರೆದಿರುತ್ತಾನೆ.

ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುವುದಿಲ್ಲ. ಕುಟುಂಬದಲ್ಲಿ ನಿರಂತರ ಸಂಘರ್ಷ ಮತ್ತು ಕಲಹ ಇರುತ್ತದೆ.

ಪಿತೃ ದೋಷ ತಪ್ಪಿಸಲು ಪರಿಹಾರ

5) ಕುಲ ದೇವತೆಯನ್ನು ಪೂಜಿಸಿ, ಕುಲ ದೇವತೆ ಕೋಪಗೊಂಡಿದ್ದರೂ ಸಹ, ಪಿತೃ ದೋಷವು ಕುಟುಂಬದ ಮೇಲೆ ಉಳಿಯುತ್ತದೆ.

4) ಪಿತೃಪಕ್ಷ ಶ್ರಾದ್ಧದ ಸಮಯದಲ್ಲಿ, ಪೂರ್ವಜರಿಗೆ ನೀರು ಮತ್ತು ಎಳ್ಳನ್ನು ಅರ್ಪಿಸಿ, ಬ್ರಾಹ್ಮಣರು ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಿ.

3) ಪಿತೃಪಕ್ಷದ ಸಮಯದಲ್ಲಿ ಪೂರ್ವಜರ ಶಾಂತಿಗಾಗಿ ಹವನ, ಪೂಜೆಯನ್ನು ಮಾಡಿ.

2) ಪಿತೃ ದೋಷದ ಪರಿಹಾರಕ್ಕಾಗಿ ಬಡವರಿಗೆ ಸೇವೆ ಮಾಡಿ, ಗೋಶಾಲೆಗೆ ದಾನ ನೀಡಿ, ಅಥವಾ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿ.

1) ಪಿತೃಗಳ ಹೆಸರಿನಲ್ಲಿ ಅರಳಿ, ಬಾಳೆ, ಅಶ್ವತ್ಥ ಮರಗಳನ್ನು ನೆಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)