ನ್ಯೂಸ್

ನೀನು ಸತ್ತರೆ ನಾವು ನೆಮ್ಮದಿಯಾಗಿರುತ್ತೇವೆ... ಒಂದೇ ಒಂದು ಮಾತಿಗೆ ಸಾವಿಗೆ ಶರಣಾದ ಯುವತಿ! Young woman

Young woman : ನಮ್ಮ ಪ್ರೀತಿಗೆ ನೀನೇ ಅಡ್ಡಿ... ನೀನಿಲ್ಲದಿದ್ದರೆ ನಾವು ನೆಮ್ಮದಿಯಾಗಿ ಇರುತ್ತೇವೆ... ನೀನು ಸಾಯಲೇಬೇಕು ಎಂದು ಪ್ರೇಮಿಗಳಿಬ್ಬರು ಯುವತಿಯೊಬ್ಬಳನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಆಘಾತಕಾರಿ ಘಟನೆ ಸಂಚಲನ ಮೂಡಿಸಿದೆ.

ಪೊಲೀಸರ ಪ್ರಕಾರ, ಮೃತಳನ್ನು ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ಮಂಡಲದ ಗೊಂಡಿಪಲ್ಲಿ ಗ್ರಾಮದ ಸ್ವಾತಿ (21) ಎಂದು ಗುರುತಿಸಲಾಗಿದೆ. ಈಕೆ ಅನಂತಪುರದ ನಳಂದ ಪದವಿ ಕಾಲೇಜಿನಲ್ಲಿ ಯುಜಿಯ ಮೂರನೇ ವರ್ಷದಲ್ಲಿ ಓದುತ್ತಿದ್ದಳು.

ಸ್ವಾತಿ ಓದುತ್ತಿರುವಾಗಲೇ ರಕ್ತ ಪರೀಕ್ಷಾ ಕೇಂದ್ರದಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅದೇ ಲ್ಯಾಬ್​ನಲ್ಲಿ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್ ಮತ್ತು ಮತ್ತೊಬ್ಬ ಟೆಕ್ನೀಷಿಯನ್ ಯುವತಿಯೊಂದಿಗೆ ಸ್ವಾತಿ ಸ್ನೇಹ ಬೆಳೆಸಿಕೊಂಡಿದ್ದಳು. ಹೀಗಿರುವಾಗ ಅರುಣ್ ಕುಮಾರ್ ಮತ್ತು ಸ್ವಾತಿ ಪರಸ್ಪರ ಪ್ರೀತಿಸಲು ಆರಂಭಿಸಿದರು.

ಈ ವಿಷಯ ತಿಳಿದ ಯುವತಿ ಸೋಮವಾರ ಬೆಳಗ್ಗೆ ಸ್ವಾತಿಗೆ ಕರೆ ಮಾಡಿ ನನ್ನ ಗೆಳೆಯನನ್ನು ನೀನು ಹೇಗೆ ಪ್ರೀತಿಸುತ್ತೀಯಾ? ನಾವು ಮೊದಲಿನಿಂದಲೂ ಪ್ರೀತಿಸುತ್ತಿದ್ದೇವೆ. ನೀನು ದಾರಿಗೆ ಅಡ್ಡ ಬರುತ್ತಿದ್ದೀಯ, ಈ ವಿಷಯವನ್ನು ನಾನು ಲ್ಯಾಬ್‌ನಲ್ಲಿರುವ ಮತ್ತು ನಿಮ್ಮ ಹಾಸ್ಟೆಲ್‌ನಲ್ಲಿರುವ ಎಲ್ಲರಿಗೂ ಹೇಳುತ್ತೇನೆ ಎಂದು ಬೆದರಿಕೆ ಹಾಕಿದಳು. ಅದೇ ರೀತಿ, ಅರುಣ್ ಕುಮಾರ್ ಕೂಡ ಸ್ವಾತಿಗೆ ಅದೇ ರೀತಿ ಬೆದರಿಕೆ ಹಾಕಿರುವ ಆರೋಪ ಇದೆ.

ಇದರಿಂದ ಬೇಸತ್ತ ಸ್ವಾತಿ ಸೋಮವಾರ ಬೆಳಗ್ಗೆ 7.30ಕ್ಕೆ ಬಾಲಾಜಿ ಲೇಡೀಸ್ ಹಾಸ್ಟೆಲ್‌ನಲ್ಲಿರುವ ತನ್ನ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾತಿಯ ತಂದೆ ಅರ್ಚಕ ನಾಗಭೂಷಣಂ ಅವರ ದೂರಿನ ಆಧಾರದ ಮೇಲೆ, ಅನಂತಪುರ ಟೌನ್ ಸಿಐ ಶ್ರೀಕಾಂತ್ ಯಾದವ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)