ಚಂಡಿಗಢ: ವೇಗವಾಗಿ ಬಂದ ಪಿಕ್‌ಅಪ್ ವಾಹನವೊಂದು ಸೈಕಲ್ ಸವಾರಿಗೆ ಗುದ್ದಿ ದೇಹವನ್ನು ಸುಮಾರು 2 ಕಿ.ಮೀ.ಯಷ್ಟು ದೂರು ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಭಯಾನಕ ದೃಶ್ಯ ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ.
ಇದನ್ನೂ ಓದಿ: 26/11 ಉಗ್ರ ಕಸಬ್ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಉಜ್ವಲ್ಗೆ ಬಿಜೆಪಿ ಟಿಕೆಟ್! ಪೂನಂಗೆ ಕೊಕ್?
ಹರಿಯಾಣದ ರಾಷ್ಟ್ರೀಯ ಹೆದ್ದಾರಿ 9ರ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಶಾಕ್ಗೆ ಒಳಗಾಗಿದ್ದಾರೆ. ಪಿಕ್‌ಅಪ್ ವಾಹನ ಹಿಂದಿದ್ದ ಕೆಲವರು ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಪಿಕ್‌ಅಪ್ ವಾಹನವನ್ನು ನಿಲ್ಲಿಸಿ ಚಾಲಕನಿಗೆ ಥಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಕರ್ಮ್‌ಗಢ್ ಗ್ರಾಮದ 50 ವರ್ಷದ ಗುರ್ನಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಪನ್ನಿವಾಲಾ ಮೋಟಾದಿಂದ ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಪಿಕಅಪ್ ಟ್ರಕ್ ಸೈಕಲ್ ಸವಾರನನ್ನು ಗುದ್ದಿ ಆ ವ್ಯಕ್ತಿಯನ್ನು ಎಳೆದುಕೊಂಡು ವೇಗವಾಗಿ ಸಾಗಿದೆ. ಪಿಕ್‌ಅಪ್ ಹಿಂದೆ ಬರುತ್ತಿದ್ದ ಚಾಲಕ ಸಿಗ್ನಲ್ ಮಾಡಿದರು ನಿಲ್ಲಿಸಿಲ್ಲ.
ಕೊನೆಗೂ, ಪಿಕ್‌ಅಪ್ ವಾಹನ ಮುಂದೆ ಅಡ್ಡಲಾಗಿ ಮತ್ತೊಂದು ವಾಹನ ನಿಲ್ಲಿಸಿ ತಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಪಿಕಅಪ್ ಟ್ರಕ್ ಅಡಿಯಿಂದ ಹೊರಗೆ ಎಳೆದು ಆಸ್ಪತ್ರೆಗೆ ಸಾಗಿಸಿದರು ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.ಈ ಮಧ್ಯೆ ಸ್ಥಳದಲ್ಲಿದ್ದವರು ಕೋಪಗೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯಗಳೆಲ್ಲ ಮೊಬೈಲ್‌ನಲ್ಲಿ ಸೆರೆಯಾಗಿದೆ. ಪಿಕ್‌ಅಪ್ ಚಾಲಕನ ವಿರುದ್ಧ ಕೊಲೆಯ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.