ನ್ಯೂಸ್

'ರಾಮನಿಗಾಗಿ ಹಿಂದೂಗಳು ಕಾದಿದ್ದು 500 ವರ್ಷ': ಸ್ಮೃತಿ ಇರಾನಿ

ಕೋಲ್ಕತ್ತಾ: ಸುದೀರ್ಘ ಕಾನೂನು ಹೋರಾಟವನ್ನು ಸಹಿಸಿಕೊಂಡ ಭಾರತೀಯರ ತಾಳ್ಮೆಯನ್ನು ಶ್ಲಾಘಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಯೋಧ್ಯೆ ರಾಮಮಂದಿರದಲ್ಲಿ ರಾಮನಿಗಾಗಿ ಹಿಂದೂಗಳು ಕಾದಿದ್ದು 500 ವರ್ಷಗಳ ಕಾಲ ಎಂದು ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ ಎಫ್​ಐಸಿಸಿಐ ಎಫ್ಎಲ್​ಓ (FICCI FLO) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಇರಾನಿ, "ನಮ್ಮ ದೇವರ ಪ್ರತಿಷ್ಠಾಪನೆಗೆ 500 ವರ್ಷಗಳ ಕಾಲ ಕಾದಿದ್ದೇವೆ ಎಂದು ಹೇಳಿದರು. ಇನ್ನು ರಾಮಮಂದಿರ ಉದ್ಘಾಟನೆಗೆ ನೀಡಲಾಗಿದ್ದ ಆಹ್ವಾನ ತಿರಸ್ಕರಿಸಿದವರಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವೆ, ದೇವರಿಗಿಂತ ತಾವು ದೊಡ್ಡವರು ಎಂದು ಕೆಲವರ ಭಾವಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಇತರ ಸಾಮಾಜಿಕ ವಿಷಯಗಳ ಕುರಿತು ಮಾತನಾಡಿದ ಸೃತಿ, ಹಾನಿಕಾರಕ ಆನ್‌ಲೈನ್ ವಿಷಯಗಳಿಂದ ಮಕ್ಕಳನ್ನು ರಕ್ಷಿಸುವಲ್ಲಿ ಪೋಷಕರು ಹೆಚ್ಚು ಜಾಗರೂಕತೆ ವಹಿಸಬೇಕು. ಮಕ್ಕಳು 8-10 ವರ್ಷದೊಳಗಿನವರಾಗಿದ್ದರೆ, ಅವರಿಗೆ ಫೇಸ್‌ಬುಕ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದ ಬಳಕೆ ಅಗತ್ಯವಿಲ್ಲ ಎಂದು ಹೇಳಿದರು.

ಈ ವಿಷಯದಲ್ಲಿ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗಳಲ್ಲಿ ಯಾವುದೇ ಅಸಭ್ಯ ವಿಷಯಗಳು ನಿಮ್ಮ ಗಮನಕ್ಕೆ ಬಂದರೆ, ಕೂಡಲೇ ಅದನ್ನು ರಿಪೋರ್ಟ್​ ಮಾಡಬೇಕು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).