More

    ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಫೈನಲ್‌ಗೆ ಕನ್ನಡಿಗ ರೋಹನ್ ಬೋಪಣ್ಣ ಜೋಡಿ

    ಮೆಲ್ಬೋರ್ನ್: ಎರಡನೇ ಶ್ರೇಯಾಂಕಿತ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಆತಿಥೇಯ ದೇಶದ ಮ್ಯಾಥ್ಯೂ ಎಬ್ಡೆನ್ ಜೋಡಿ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದೆ. ಚಾಂಪಿಯನ್ ಆಗುವ ಮೂಲಕ ಮುಂದಿನ ವಾರ ವಿಶ್ವ ಡಬಲ್ಸ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಸಂಭ್ರಮಿಸುವ ಅವಕಾಶವೂ 43 ವರ್ಷದ ಬೋಪಣ್ಣಗೆ ಎದುರಾಗಿದೆ.

    ರೋಹನ್ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ ಸತತ ಎರಡನೇ ಗ್ರಾಂಡ್ ಸ್ಲಾಂನಲ್ಲಿ ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದೆ. ಗುರುವಾರ ನಡೆದ ಸೆಮಿೈನಲ್‌ನಲ್ಲಿ ಬೋಪಣ್ಣ- ಎಬ್ಡೆನ್ ಜೋಡಿ 6-3, 3-6, 7-6 (10-7) ಸೆಟ್‌ಗಳಿಂದ ಶ್ರೇಯಾಂಕ ರಹಿತ ತೋಮಸ್ ಮಚಾಕ್-ಜಾಂಗ್ ಝಿಜೆನ್ ಜೋಡಿ ಎದುರು ಗೆದ್ದು ಬೀಗಿತು. ಇಂಡೋ-ಆಸೀಸ್ ಜೋಡಿ ಮೂರನೇ ಸೆಟ್‌ನಲ್ಲಿ ತೀವ್ರ ಪ್ರತಿರೋಧ ಎದುರಿಸಿತು. ಅಂತಿಮವಾಗಿ ಟೈ ಬ್ರೇಕರ್‌ಗೆ ಸಾಗಿದ ಸೆಟ್‌ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಮೇಲುಗೈ ಸಾಧಿಸಿತು.

    ಬೋಪಣ್ಣ-ಎಬ್ಡೆನ್ ಜೋಡಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಮೊದಲ ಬಾರಿ ಫೈನಲ್ಗೇರಿದ್ದು, ಒಟ್ಟಾರೆ ಮೂರನೇ ಗ್ರಾಂಡ್ ಸ್ಲಾಂ ೈನಲ್ ಆಗಿದೆ. 2013, 2023ರಲ್ಲಿ ಯುಎಸ್ ಓಪನ್ ಫೈನಲ್ ಆಡಿದ್ದಾರೆ. ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಪ್ರಶಸ್ತಿ ಸುತ್ತಿನಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ- ಆಂಡ್ರಿಯಾ ವವಾಸ್ಸೋರಿ ವಿರುದ್ಧ ಶನಿವಾರ ಸೆಣಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts