ಜೈಪುರ: ಹಿಂದೂ ವಿದ್ಯಾರ್ಥಿಗಳು ಹಣೆಗೆ ಇಟ್ಟಿದ್ದ ತಿಲಕವನ್ನು ಅಳಿಸಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಹೇಳಿರುವ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಎರಡು ಸಮುದಾಯಗಳ ನಡುವೆ ಹೊಡೆದಾಟವಾಗಿದೆ.
ಅಲ್ವಾರ್ ಜಿಲ್ಲೆಯ ಚೋಮಾ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು, ಮುಸ್ಲಿಂ ಧರ್ಮದ 8 ವಿದ್ಯಾರ್ಥಿಗಳು ಘಟನೆ ನಡೆದ ನಂತರ ತಲೆಮಾರಿಸಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆಯನ್ನು ವಹಿಸಿದ್ದಾರೆ.
ಜುಲೈ 25ರಂದು ಶುಭಂ ರಜಪೂತ್ ಎಂಬ ವಿದ್ಯಾರ್ಥಿಯು ಶಾಲೆಗೆ ಎಂದಿನಂತೆ ಹೋಗಿದ್ದಾನೆ. ಈ ವೇಳೆ ಕೆಲವು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಆತನನ್ನು ಕರೆದು ಹಣೆ ಮೇಲೆ ತಿಲಕ ಇಟ್ಟುಕೊಂಡು ಶಾಲೆಗೆ ಬಾರದಂತೆ ಹೇಳಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದ ಶುಭಂ ಮಾರನೇ ದಿನವು ಹಣೆಗೆ ತಿಲಕವನ್ನಿಟ್ಟುಕೊಂಡು ಶಾಲೆಗೆ ಹೋಗಿದ್ದಾನೆ.
ಜುಲೈ 27ರಂದು ಮುಸ್ಲಿಂ ಸಮುದಾಯದ ಎಂಟಕ್ಕೂ ಹೆಚ್ಚು ವಿದ್ಯಾರ್ಥಿಗಳು ಶುಭಂ ಜೊತೆ ಜಗಳ ತೆಗೆದಿದ್ದು, ಆತ ಹಣೆ ಮೇಲೆ ಇಟ್ಟಿರುವ ಕುಂಕುಮವನ್ನು ಅಳಿಸಲು ಯತ್ನಿಸಿದ್ದಾರೆ. ಈ ವೇಳೆ ಶಾಲೆಯ ಪ್ರಾಂಶುಪಾಲರು ಮಧ್ಯಪ್ರವೇಶಿಸಿದ್ದು, ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಅದೇ ದಿನ ಸಂಜೆ ಮತ್ತೆ ವಿದ್ಯಾರ್ಥಿಗಳು ಗಲಾಟೆ ತೆಗೆದಿದ್ದು, ಇದನ್ನು ಪ್ರಾಂಶುಪಾಲರ ಗಮಕ್ಕೆ ತರಲು ಶುಭಂ ಮುಂದಾದಗ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ನಿನ್ನ ಕುಟುಂಬದವರ ಸಮೇತ ಇಸ್ಲಾಂ ಧರ್ಮಕ್ಕೆ ಮತಾಂತವಾಗಬೇಕು ಇಲ್ಲವಾದಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿ ಆರೋಪಿಗಳು ಪರಾರಿಯಾಗಿದ್ದಾರೆ.
ವಿಚಾರ ತಿಳಿದು ಶುಭಂ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಎರಡು ಸಮುದಾಯಗಳ ನಡುವೆ ಹೊಡೆದಾಟವಾಗಿದ್ದು, ಈ ಸಂಬಂಧ ಚೋಮು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ.