More

  ಸಹೋದರರ ನಡುವೆ ವಾಗ್ವಾದ; ತಮ್ಮನನ್ನು ಗುಂಡಿಕ್ಕಿ ಕೊಂದ ಯೋಧ

  ಜೈಪುರ: ವಿಚಾರ ಒಂದಕ್ಕೆ ಅಣ್ಣ-ತಮ್ಮನ ನಡುವೆ ಶುರುವಾದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

  ಭಾರತೀಯ ಸೇನೆಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಧೀರ್​ ಸಿಂಗ್​(43) ತನ್ನ ಸಹೋದರ ಹೀರಾ ಸಿಂಗ್​(40)ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

  ಪ್ರಕರಣದ ಹಿನ್ನಲೆ

  ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಭೂಪೇಂದ್ರ ಸಿಂಗ್​ ಜೈಪುರದ ಬಿಂದಯಾಕ ಪ್ರದೇಶದ ನಿವಾಸಿಗಳಾದ ಧೀರ್​ ಸಿಂಗ್​ ಹಾಗೂ ಆತನ ಹೀರಾ ಸಿಂಗ್​ ನಡುವೆ ವಿಚಾರ ಒಂದಕ್ಕೆ ಗಲಾಟೆ ಶುರುವಾಗಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಧೀರ್​ ಸಿಂಗ್​ ತನ್ನ ಬಳಿ ಇದ್ದ​ ಗನ್​ನಿಂದ ಸಹೋದರನ ಭುಜಕ್ಕೆ ಗುಂಡು ಹಾರಿಸಿದ್ದಾನೆ.

  ಸಹೋದರರ ನಡುವೆ ವಾಗ್ವಾದ; ತಮ್ಮನನ್ನು ಗುಂಡಿಕ್ಕಿ ಕೊಂದ ಯೋಧ

  ಇದನ್ನೂ ಓದಿ: VIDEO| ವಿವಾಹಿತನಿಗಾಗಿ ಹೊಡೆದಾಡಿಕೊಂಡ ಮಹಿಳೆಯರು

  ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಹೀರಾ ಸಿಂಗ್​ ಮೃತಪಟ್ಟಿದ್ದಾರೆ. ಪ್ರಕರಣ ಆರೋಪಿ ಧೀರ್​ ಸಿಂಗ್​ ವಿರುದ್ಧ ಭಾರತ ದಂಡ ಸಂಹಿತೆ(IPC Section) 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ.

  ಆರೋಪಿಯಿಂದ 12 ಬೋರ್ ಪರವಾನಗಿ ಪಡೆದ ರೈಫಲ್ ಮತ್ತು ಎರಡು ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ಭೂಪೇಂದ್ರ ಸಿಂಗ್​ ತಿಳಿಸಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts