ನ್ಯೂಸ್

ಹೈಕೋರ್ಟ್​ ತೀರ್ಪಿನ ಬಳಿಕ ಶಾಲೆ ಬದಲಾವಣೆ ಬಗ್ಗೆ ನಿರ್ಧಾರ: ಬಾಲಕಿ ಕುಟುಂಬಸ್ಥರು Hijab controversy

ತಿರುವನಂತಪುರಂ: ಕೇರಳದ ಪಲ್ಲೂರುತಿಯ ಸೇಂಟ್​ ರೀಟಾಸ್​ನಲ್ಲಿರುವ ಹಿಜಾಬ್​ ವಿವಾದ ( Hijab controversy) ತಿರುವು ಪಡೆದುಕೊಂಡಿದ್ದು, ಬಾಲಕಿಯ ಕುಟುಂಬವು ಆಕೆಯ ಶಾಲೆಯನ್ನು ತಕ್ಷಣ ಬದಲಾಯಿಸುವುದಿಲ್ಲ. ಬದಲಿಗೆ ಹೈಕೋರ್ಟ್​ ನಿಲುವನ್ನು ತಿಳಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದು, ಶುಕ್ರವಾರ ಹೈಕೋರ್ಟ್​ ತೀರ್ಪು ಬರುವವರೆಗೂ ಮಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪಾಲಕರ ನಿಲುವು ಏನು?

ಮಗಳು ಶಾಲೆಯಲ್ಲಿ ಮುಂದುವರೆಯಲು ಬಯಸದಿದ್ದರೆ, ಅವಳ ಶಾಲೆಯನ್ನು ಶೀಘ್ರದಲ್ಲೇ ಬದಲಾಯಿಸುವುದಾಗಿ ತಿಳಿಸಿದ್ದರು. ಅದೇ ರೀತಿ ಶಾಲಾ ಆಡಳಿತ ಮಂಡಳಿ, ಹಿಜಾಬ್ ಧರಿಸದೆ ಶಾಲೆಗೆ ಬರಲು ಒಪ್ಪಿಗೆ ಪತ್ರ ನೀಡಿದರೆ ವಿದ್ಯಾರ್ಥಿನಿ ತನ್ನ ಅಧ್ಯಯನವನ್ನು ಮುಂದುವರಿಸಬಹುದು ಎಂದು ತಿಳಿಸಿತ್ತು.

ಹಿನ್ನಲೆ

ಹಿಜಾಬ್​ ಧರಿಸಿದ್ದಕ್ಕಾಗಿಯೇ ವಿದ್ಯಾರ್ಥಿನಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ದೂರ ಶಿಕ್ಷಣ ನಿರ್ದೇಶಾಲಯ (ಡಿಡಿಇ) ಈ ಹಿಂದೆ ವರದಿ ಮಾಡಿತ್ತು. ಇದು ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ. ಶಾಲೆಯು ಇದನ್ನು ನಿರಾಕರಿಸಿದಿಯೇ ಹೊರತು ವಿದ್ಯಾರ್ಥಿಯನ್ನು ತರಗತಿಗೆ ಎಂದಿಗೂ ನಿರಾಕರಿಸಿಲ್ಲ ಎಂದು ಡಿಡಿಇ ಅಧ್ಯಕ್ಷ ಜೋಶಿ ಅವರು ಹೇಳಿದ್ದರು.

ಘಟನೆಯ ಬಳಿಕ ಬಾಲಕಿ ಅಸ್ವಸ್ಥಳಾಗಿದ್ದಾಳೆ. ಆಕೆ ಅದೇ ಶಾಲೆಯಲ್ಲಿ ಮುಂದುವರೆಸಲು ಬಯಸಿದರೆ ಕಳುಹಿಸುತ್ತೇವೆ ಒಪ್ಪದಿದ್ದರೆ ಆಕೆಯನ್ನು ವಾಪಸ್ಸು ಕರೆದುಕೊಂಡು ಹೋಗುತ್ತೇವೆ. ಸಣ್ಣ ವಿಚಾರಕ್ಕೆ ಆರಂಭವಾದ ವಿವಾದ ತೀವ್ರ ಒತ್ತಡವನ್ನು ಉಂಟುಮಾಡಿದೆ ಎಂದು ಆಕೆಯ ತಾಯಿ ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಹಿಜಾಬ್ ಇಲ್ಲದೆ ಹಾಜರಾಗುವುದಾಗಿ ಪಾಲಕರಿಂದ ಲಿಖಿತ ಭರವಸೆ ಕೋರಲಾಗಿದೆ ಎಂಬ ವರದಿಗಳನ್ನು ಪಿಟಿಎ ನಿರಾಕರಿಸಿದೆ. ಕೆಲವು ಪೋಷಕರು ಈ ವಿಷಯವನ್ನು ಎತ್ತಿದ್ದಾರೆ ಆದರೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)