ನ್ಯೂಸ್

ಶಬರಿಮಲೆ ಚಿನ್ನ ಕಳವು ಪ್ರಕರಣ: ಕ್ರಿಮಿನಲ್​ ಪಿತೂರಿ ತನಿಖೆಗೆ ಹೈಕೋರ್ಟ್ ಆದೇಶ Gold Theft Case

ಕೇರಳ: ಶಬರಿಮಲೆ ಕಳ್ಳತನ ಪ್ರಕರಣದ ಕ್ರಿಮಿನಲ್​ ಪಿತೂರಿಯ ತನಿಖೆ ( Gold Theft Case) ನಡೆಸಲು ಹೈಕೋರ್ಟ್​ ವಿಶೇಷ ತನಿಖಾ ತಂಡಕ್ಕೆ ಸೂಚನೆ ನೀಡಿದ್ದು, ದೇವಸ್ವಂ ಮಂಡಳಿಯ ನಿಮಿಷಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಮಧ್ಯಂತರ ಆದೇಶ ನೀಡಿದೆ ಎಂದು ವರದಿಯಾಗಿದೆ.

ಎಸ್​ಐಟಿ ತನಿಖಾ ವರದಿಯಲ್ಲಿ ದೇವಸ್ವಂ ಮಂಡಳಿಯ ಅಧಿಕಾರಿಗಳ ವಿರುದ್ಧ 2019 ರಲ್ಲಿನ ಆರೋಪಗಳಿದ್ದರೂ, ಕೂಡಾ ಅಲ್ಲಿನ ಅಧಿಕಾರಿಗಳು ಮೌನವಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದೇವಸ್ವಂ ಮಂಡಳಿ ಅಧಿಕಾರಿಗಳಿಂದ ಸಹಾಯ ಪಡೆದಿದ್ದಾರೆ ಎಂದು ಹೈಕೋರ್ಟ್​ ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಕ್ರಿಮಿನಲ್​ ಪಿತೂರಿಯ ತನಿಖೆ ನಡೆಸುವಂತೆ ವಿಶೇಷ ತಂಡಕ್ಕೆ ನಿರ್ದೇಶನ ನೀಡಿತ್ತು. 2019ರಲ್ಲಿ ಚಿನ್ನದ ಸರವನ್ನು ತೆಗೆದುಕೊಂಡು ಹಿಂತಿರುಗಿಸುವಾಗ ಅದನ್ನು ತೂಕ ಮಾಡದಿರುವುದರು ಅನುಮಾನಕ್ಕೆ ಹುಟ್ಟುಹಾಕಲು ಎಡೆ ಮಾಡಿಕೊಟ್ಟಿದೆ ಎಂದು ಹೈಕೋರ್ಟ್​ ನಿರ್ಣಯಿಸಿದೆ.

2025 ರಲ್ಲಿ ಚಿನ್ನದ ಫಲಕ ತೆಗೆಯುವ ಬಗ್ಗೆ ದೇವಸ್ವಂ ಆಯುಕ್ತರು ತಮ್ಮ ಹಿಂದಿನ ನಿಲುವಿನಿಂದ ಏಳು ದಿನಗಳಲ್ಲಿ ಹಿಂದೆ ಸರಿದಿದ್ದು ಏಕೆ ಎಂದು ಹೈಕೋರ್ಟ್​ ಪ್ರಶ್ನಿಸಿದೆ. ಹಾಗೆಯೇ, 2025ರಲ್ಲಿ ವಿಶೇಷ ಆಯುಕ್ತರಿಗೆ ತಿಳಿಸದೆ ಚಿನ್ನದ ಫಲಕ ತೆಗೆಯುವ ಹಿಂದೆ ವಂಚನೆಯನ್ನು ಮುಚ್ಚಿಹಾಕುವ ಷಡ್ಯಂತರ ನಡೆದಿತ್ತು ಎಂದು ನ್ಯಾಯಾಲಯ ಅನುಮಾನವನ್ನು ವ್ಯಕ್ತಪಡಿಸಿದೆ.

ಪ್ರಾಥಮಿಕ ತನಿಖಾ ವರದಿಯಲ್ಲಿ ಚಿನ್ನದ ಕಳ್ಳತನದ ಹಿಂದೆ ಪಿತೂರಿ ಇದೆ ಎಂದು ಬಹಿರಂಗವಾಗಿದ್ದರೂ, ತನಿಖೆ ಏಕೆ ಮುಂದುವರೆಸುತ್ತಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ನವೆಂಬರ್​ 15 ಕ್ಕೆ ಈ ಪ್ರಕರಣವನ್ನು ವಿಚಾರಣೆ ನಡೆಸುವುದಾಗಿ ಹೈಕೋರ್ಟ್​ ತಿಳಿಸಿದೆ. ಇನ್ನು ಶಬರಿ ಮಲೆ ಚಿನ್ನದ ಕಳ್ಳತನದಲ್ಲಿ ಪ್ರತಿ 2 ವಾರಗಳಿಗೊಮ್ಮೆ ಪ್ರಗತಿ ವರದಿಯನ್ನು ಸಲ್ಲಿಸಬೇಕೆಂದು ದೇವಸ್ವಂ ಪೀಠ ನಿರ್ದೇಶಿಸಿತ್ತು. ಇದರ ಆಧಾರದ ಮೇಲೆ ಇಂದು ಪ್ರಕರಣದ ವಿಚಾರಣೆ ನಡೆಯಿತು. (ಏಜೆನ್ಸೀಸ್​)