

ನೈಜೀರಿಯಾ: ಪೆಟ್ರೋಲ್ ಟ್ಯಾಂಕರ್ (fuel truck explodes) ಸ್ಫೋಟಗೊಂಡು ಭಾರಿ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಮೂವತ್ತೊಂದು ಜನರು ಸಾವನ್ನಪ್ಪಿ 17 ಜನರು ಗಾಯಗೊಂಡಿದ್ದಾರೆ. ನೈಜೀರಿಯಾದಲ್ಲಿ ಈ ಘಟನೆ ನಡೆದಿದೆ.
ನೈಜೀರಿಯಾ ರಾಜ್ಯದ ಬಿಡಾ ಪ್ರದೇಶದಲ್ಲಿ ಟ್ರಕ್ ಪಲ್ಟಿಯಾದ ನಂತರ ಸ್ಫೋಟ ಸಂಭವಿಸಿದೆ. ಚೆಲ್ಲಿದ ಇಂಧನವನ್ನು ಸಂಗ್ರಹಿಸಲು ಸ್ಥಳೀಯ ನಿವಾಸಿಗಳು ಸ್ಥಳದ ಕಡೆಗೆ ಓಡಿಹೋದರು. ಈ ವೇಳೆ ಸಂಭವಿಸಿದ ಸ್ಫೋಟದಲ್ಲಿ 17 ಜನರು ಗಾಯಗೊಂಡಿದ್ದಾರೆ, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟ್ಯಾಂಕರ್ ಚಾಲಕ, ಮಾಲೀಕರನ್ನು ಗುರುತಿಸಲು ಮತ್ತು ಅಪಘಾತದ ಕಾರಣವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ.
ನೈಜರ್ ರಾಜ್ಯ ಗವರ್ನರ್ ಉಮರು ಬಾಗೊ, ಅಪಾಯದ ಹೊರತಾಗಿಯೂ ಜನರು ಉರುಳಿದ ಟ್ಯಾಂಕರ್‌ಗಳಿಂದ ಪೆಟ್ರೋಲ್ ಸಂಗ್ರಹಿಸಲು ಹೋಗುವುದು ನಿರಾಶಾದಾಯಕವಾಗಿದೆ. ಇದು ಜನರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಮತ್ತೊಂದು ದುರಂತ ಘಟನೆ ಎಂದು ಬಾಗೊ ಹೇಳಿದರು.
ಇತ್ತೀಚಿನ ತಿಂಗಳುಗಳಲ್ಲಿ, ಉತ್ತರ ಮತ್ತು ದಕ್ಷಿಣ ನೈಜೀರಿಯಾ ನಡುವಿನ ಸರಕುಗಳ ಪ್ರಮುಖ ಸಾರಿಗೆ ಕೇಂದ್ರವಾದ ನೈಜರ್ ರಾಜ್ಯದಲ್ಲಿ ಭಾರೀ ಟ್ರಕ್‌ಗಳನ್ನು ಒಳಗೊಂಡ ಅಪಘಾತಗಳು ಹೆಚ್ಚಾಗಿವೆ, ಕಳಪೆ ರಸ್ತೆಗಳು ಮತ್ತು ರೈಲು ಜಾಲದ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.