ನ್ಯೂಸ್

ಬೇರೆಯಾಗ್ತಿದ್ದಾರಾ ಹೇಮಾ ಮಾಲಿನಿ ಪುತ್ರಿ ಇಶಾ ಮತ್ತು ಭರತ್; ಇವರು ದೂರವಾಗುತ್ತಿರುವುದಕ್ಕೆ ಬೆಂಗಳೂರಿನಲ್ಲಿರುವ ಗರ್ಲ್ ಫ್ರೆಂಡ್ ಕಾರಣಾನಾ?

ಮುಂಬೈ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಮತ್ತು ಡ್ರೀಮ್​​​ ಗರ್ಲ್ ಹೇಮಾ ಮಾಲಿನಿ ಅವರ ಮಗಳು ತಮ್ಮ ನಟನಾ ವೃತ್ತಿಗಿಂತ ತಮ್ಮ ವೈಯಕ್ತಿಕ ಜೀವನದಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚೆಗಂತೂ ಇಶಾ ಡಿಯೋಲ್ ಕುರಿತಾದ ಈ ಸುದ್ದಿ ಕೇಳಿ ಎಲ್ಲರೂ ಶಾಕ್​​​ ಆಗಿದ್ದಾರೆ. ವರದಿಗಳ ಪ್ರಕಾರ, ಇಶಾ ತನ್ನ ಪತಿ ಭರತ್ ತಖ್ತಾನಿಯಿಂದ ಬೇರೆಯಾಗಿದ್ದಾರೆ.

ಪತಿ ಭರತ್‌ನಿಂದ ಬೇರೆಯಾಗುತ್ತಿದ್ದಾರಾ ಇಶಾ ಡಿಯೋಲ್?
ಕೆಲವು ವರದಿಗಳ ಪ್ರಕಾರ, ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಾಗ ಅದರಲ್ಲಿ ಇಶಾ ಮತ್ತು ಭರತ್ ಪರಸ್ಪರ ಬೇರೆಯಾಗಿರುವ ವಿಷಯಗಳು ಬೆಳಕಿಗೆ ಬಂದಿವೆ. ಸಾರ್ವಜನಿಕವಾಗಿಯೂ ಅವರು ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಈ ಪೋಸ್ಟ್‌ನಲ್ಲಿ ಭರತ್ ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದಾರೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ಇಶಾ ಅವರ ಪತಿ ಭರತ್ ಅವರನ್ನು ನೋಡಿದ್ದೇನೆ ಎಂದು ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಭರತ್ ಗೆಳತಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದೂ ಹೇಳಲಾಗಿದೆ. ಆದರೆ, ಈ ಸುದ್ದಿಗೆ ಡಿಯೋಲ್ ಕುಟುಂಬದ ಯಾರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟ್ರೋಲ್ ಮಾಡಿದ ಬಳಕೆದಾರರು
ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಬಳಕೆದಾರರು ಅದರ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. 'ಭರತ್‌ ಅವರನ್ನು ನೋಡುವಾಗ ತನ್ನ ಕುಟುಂಬ ಮತ್ತು ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾನೆ ಎಂದು ತೋರುತ್ತದೆ', ‘ಅಮ್ಮನಿಗೆ ಆದಂತಹ ಘಟನೆ ಇಶಾಗೆ ಆಗಬಾರದು..’ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

2012 ರಲ್ಲಿ ವಿವಾಹ
ಇಶಾ ಡಿಯೋಲ್ ಜೂನ್ 29, 2012 ರಂದು ಭರತ್ ಅವರನ್ನು ವಿವಾಹವಾದರು. ಇಬ್ಬರ ಮದುವೆಯೂ ಇಸ್ಕಾನ್ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ ನೆರವೇರಿತು. ಮದುವೆಯಾದ ಐದು ವರ್ಷಗಳ ನಂತರ, ಮಗಳು ರಾಧ್ಯ ಜನಿಸಿದಳು. ನಂತರ 2019 ರಲ್ಲಿ, ಇಶಾ ಎರಡನೇ ಮಗಳು ಮಿರಾಯಾ ತಖ್ತಾನಿಗೆ ಜನ್ಮ ನೀಡಿದರು.

ಈ ತಾರಾ ಜೋಡಿಯು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ಕಾಣಬಹುದು. ಆದರೆ, ಈ ಬಾರಿ ಇಶಾ ಡಿಯೋಲ್ ಅವರ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಭರತ್ ಕಾಣಿಸಲಿಲ್ಲ. ಅಷ್ಟೇ ಅಲ್ಲ, ಹೇಮಾ ಮಾಲಿನಿ ಹುಟ್ಟುಹಬ್ಬದ ದಿನವೂ ಭರತ್ ಕಾಣಿಸಿಕೊಂಡಿರಲಿಲ್ಲ.