nasa 
ನ್ಯೂಸ್

Video: ಅನ್ಯಗ್ರಹದಲ್ಲಿ ಮೊದಲ ಬಾರಿಗೆ ಹಾರಾಡಿತು ಹೆಲಿಕಾಪ್ಟರ್!

mcbhadrashetti

ನ್ಯೂಯಾರ್ಕ್: ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಕುತೂಹಲದ ಆಗರವಾದ ಮಂಗಳ ಗ್ರಹದ ಬಗ್ಗೆ ನಾಸಾ ಎಡೆಬಿಡದೇ ಅಧ್ಯಯನ ನಡೆಸುತ್ತಿದೆ. ಇತ್ತೀಚಿಗೆ ನಾಸಾ, ತನ್ನ Perseverance ನೌಕೆಯನ್ನು (Mars 2020) ಮಂಗಳನ ಮೇಲೆ ಯಶಸ್ವಿಯಾಗಿ ಇಳಿಸಿ ಅದ್ಭುತವಾದ ಸಾಧನೆಗೈದಿದೆ.

ಈ Perseverance ನೌಕೆ ಫೆಬ್ರವರಿ 18 ರಿಂದ ಕಾರ್ಚಾಚರಣೆಯನ್ನು ಆರಂಭ ಮಾಡಿ, ಮಂಗಳ ಗ್ರಹದ ಬಗ್ಗೆ ಅನೇಕ ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತಿದೆ. ಇಷ್ಟೇ ಅಲ್ಲದೇ ನಾಸಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಂಗಳ ಗ್ರಹದಲ್ಲಿ ಹೆಲಿಕಾಪ್ಟರ್​ ಕೂಡ ಹಾರಾಡಿಸಿದೆ. ಇದು ಐತಿಹಾಸಿಕ ಸಾಧನೆಯಾಗಿದ್ದು, ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್​ ಅಥವಾ ವಿಮಾನದಂತಹ ವಾಹನ (ಮಿನಿ ಹೆಲಿಕಾಪ್ಟರ್) ಅನ್ಯಗ್ರಹದಲ್ಲಿ ಹಾರಾಡಿದಂತಾಗಿದೆ.

ಈ ಮಿನಿ ಹೆಲಿಕಾಪ್ಟರ್​ಗೆ ingenuity ಎಂದು ಹೆಸರಿಸಲಾಗಿದ್ದು, Perseverance ನೌಕೆಯಲ್ಲಿ ಅಡಕವಾಗಿತ್ತು. ನಾಸಾ ನಿರ್ದೇಶನದ ಮೆರೆಗೆ ಮಂಗಳನ ಅಂಗಳದಲ್ಲಿ ಸುಮಾರು 10 ನಿಮೀಷ ಹಾರಾಟ ನಡೆಸಿದೆ.

ಇದು ನಾಸಾ ಸಂಸ್ಥೆಗೆ ಸಿಕ್ಕಿದ ಮಹತ್ವದ ಮೈಲಿಗಲ್ಲಾಗಿದ್ದು, ಮುಂದೆ ಮಂಗಳನ ಅಂಗಳದಲ್ಲಿ ಹೆಲಿಪ್ಯಾಡ್​​ಗಳ ನಿರ್ಮಾಣಕ್ಕೂ ಇದು ಮುನ್ನುಡಿ ಬರೆದಿದೆ ಎನ್ನಲಾಗುತ್ತಿದೆ.